ಪೀಣ್ಯದ ಇಎಸ್​ಐನಲ್ಲಿದೆ ಉದ್ಯೋಗ ಅವಕಾಶ: ಮೇ 10ಕ್ಕೆ ನೇರ ಸಂದರ್ಶನ

esi peenya
Published on

ಬೆಂಗಳೂರು: ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಧೀನದಲ್ಲಿ ಕಾರ್ಯನಿರ್ವಹಿಸುವ ನೌಕರರ ರಾಜ್ಯ ವಿಮಾ ನಿಗಮದ ಪೀಣ್ಯದಲ್ಲಿರುವ ಇಎಸ್​ಐ ಆಸ್ಪತ್ರೆಯ ವಿವಿಧ ವಿಭಾಗಗಳಲ್ಲಿ ಸೀನಿಯರ್​ ರೆಸಿಡೆಂಟ್​ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಯು 3 ವರ್ಷದ ಗುತ್ತಿಗೆ ಅವಧಿಗೆ ಒಳಪಟ್ಟಿದೆ. ಆಸಕ್ತ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.

ಅನಸ್ತೇಷಿಯಾ ಮತ್ತು ಐಸಿಯುನಲ್ಲಿ 1 ಸ್ಥಾನ (ಆರ್ಥಿಕವಾಗಿ ಹಿಂದುಳಿದ ವರ್ಗ), ಒಬಿಸಿ (ಎಸ್ಸಿಗೆ)-1 ಸ್ಥಾನ, ಸರ್ಜರಿ ವಿಭಾಗದಲ್ಲಿ ಇತರ ಹಿಂದುಳಿದ ವರ್ಗಕ್ಕೆ- 1 ಸ್ಥಾನ ಮೀಸಲಿರಿಸಲಾಗಿದೆ. ಎಂಬಿಬಿಎಸ್​ ಜತೆ ಪಿಜಿ ಪದವಿ/ ಡಿಪ್ಲೊಮಾ ಮಾಡಿರುವ ಅಥವಾ ಎಂಬಿಬಿಎಸ್​ ಮಾಡಿ 2 ವರ್ಷ ವೃತ್ತಿ ಅನುಭವ ಇರುವ 45 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ. 11ನೇ ಹಂತದ ವೇತನ ಜತೆ ಇತರ ಭತ್ಯೆಗಳನ್ನು ನೀಡಲಾಗುವುದು. ಆಯ್ಕೆಯಾಗುವ ಅಭ್ಯರ್ಥಿಗಳು 95,000 ರೂ.ನ ಸೇವಾಬಾಂಡ್​ ನೀಡಬೇಕಿದೆ.

ಸಂದರ್ಶನ ನಡೆಯುವ ದಿನಾಂಕ: 10.5.2022 (ಬೆಳಗ್ಗೆ 9.15 ರಿಂದ 11 ಗಂಟೆವರೆಗೆ ನೋಂದಣಿಗೆ ಅವಕಾಶ)

ಅಧಿಸೂಚನೆಗೆ: https://bit.ly/3EUtAA3

ಮಾಹಿತಿಗೆ: www.esic.nic.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net