ರಾಜ್ಯದ ಎಲ್ಲ ಶಾಲೆಯಲ್ಲೂ ಯೋಗ ದಿನಾಚರಣೆ: ನಾಳೆ ಅರ್ಧ ದಿನ ಮಾತ್ರ ತರಗತಿ

yoga
Published on

ಮೈಸೂರು: ರಾಜ್ಯದ ಎಲ್ಲ ಶಾಲೆಗಳಲ್ಲಿ ಜೂ.21ರ ವಿಶ್ವ ಯೋಗ ದಿನ ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಅಂದು ಅರ್ಧ ದಿನ ಶಾಲೆ ನಡೆಸಿ ಶನಿವಾರ ಪೂರ್ತಿ ದಿನ ಶಾಲೆ ನಡೆಸಲು ಸೂಚಿಸಲಾಗಿದೆ.

ಸ್ಥಳಿಯ ಜನಪ್ರತಿನಿಧಿಗಳು, ಅಧಿಕಾರಿಗಳು, ಎಸ್​ಡಿಎಂಸಿ ಅಧ್ಯಕ್ಷರು, ಸದಸ್ಯರು, ಸ್ಥಳಿಯ ಯೋಗ ಸಂಸ್ಥೆಗಳ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಯೋಗ ದಿನ ಆಚರಿಸಲು ಸೂಚಿಸಲಾಗಿದೆ. ಒಂದು ಗಂಟೆಯ ಅವಧಿಯಲ್ಲಿ ವಿದ್ಯಾರ್ಥಿಗಳ ವಯಸ್ಸಿಗೆ ಅನುಗುಣವಾಗಿ ಯೋಗಾಸನ ಅಭ್ಯಾಸ ಮತ್ತು ಪ್ರದರ್ಶನ ಏರ್ಪಡಿಸುವಂತೆ ಸಲಹೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net