More

    ಅಗ್ನಿಪಥ ವಿರುದ್ಧ ಪ್ರತಿಭಟನೆ: ಅಗ್ನಿವೀರರಿಗೆ ಉದ್ಯೋಗದ ಆಫರ್​ ಕೊಟ್ಟ ಉದ್ಯಮಿ ಆನಂದ್ ಮಹೀಂದ್ರಾ

    ನವದೆಹಲಿ: ‘ಅಗ್ನಿಪಥ’ ಯೋಜನೆ ವಿರೋಧಿಸಿ ದೇಶದ ಹಲವೆಡೆ ಹಿಂಸಾತ್ಮಕ ಪ್ರತಿಭಟನೆಗಳು ನಡೆಯುತ್ತಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಅಗ್ನಿವೀರರ ಪರವಾಗಿ ಮಹತ್ತರ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ‘ಅಗ್ನಿಪಥ’ ಯೋಜನೆಯಡಿ ಸೇನೆಗೆ ಸೇರುವ ಅಗ್ನಿವೀರರಿಗೆ ತಮ್ಮ ಕಂಪನಿಗಳಲ್ಲಿ ಉದ್ಯೋಗಾವಕಾಶ ನೀಡುವುದಾಗಿ ಹೇಳಿದ್ದಾರೆ.

    ಈ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, ಕಾರ್ಪೋರೇಟ್ ವಲಯದಲ್ಲಿ ಅಗ್ನಿವೀರರ ಉತ್ತಮ ಉದ್ಯೋಗಾವಕಾಶವಿದೆ. ನಾಯಕತ್ವ, ಟೀಂ ವರ್ಕ್ ಮತ್ತು ದೈಹಿಕ ತರಬೇತಿಯೊಂದಿಗೆ, ಅಗ್ನಿವೀರರು ಉದ್ಯಮಕ್ಕೆ ಮಾರುಕಟ್ಟೆ-ಸಿದ್ಧ ವೃತ್ತಿಪರ ಪರಿಹಾರಗಳನ್ನು ಒದಗಿಸುತ್ತಾರೆ, ಪೂರೈಕೆ, ಸರಪಳಿ ನಿರ್ವಹಣೆ ಕೆಲಸವನ್ನು ಎಲ್ಲಿ ಬೇಕಾದರೂ ಮಾಡಬಹುದು. ಸೇನೆಯಲ್ಲಿ ನಾಲ್ಕು ವರ್ಷಗಳ ಸೇವೆಯ ನಂತರ ಅಗ್ನಿವೀರರಿಗೆ ತಮ್ಮ ಕಂಪನಿಗಳಲ್ಲಿ ಉದ್ಯೋಗ ಅವಕಾಶ ನೀಡುವುದಾಗಿ ಘೋಷಿಸಿದ್ದಾರೆ.

    ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಬಿಹಾರದಲ್ಲಿ ಪ್ರತಿಭಟನಾಕಾರರು ಅನೇಕ ರೈಲುಗಳಿಗೆ ಬೆಂಕಿ ಹಚ್ಚಿದ್ದಾರೆ. ಬಿಹಾರ ಒಂದರಲ್ಲೇ 700 ಕೋಟಿ ರೈಲ್ವೆ ನಷ್ಟವಾಗಿದೆ ಎಂದು ಅವರು ಹೇಳಿದ್ದಾರೆ.

    ಕನ್ನಡದಲ್ಲೇ ಟ್ವೀಟ್​ ಮಾಡಿದ ಪ್ರಧಾನಿ ನರೇಂದ್ರ ಮೋದಿ

    ಯುವ ನಟನ ಬರ್ಬರ ಹತ್ಯೆ: ಕೆಲ ತಿಂಗಳ ಹಿಂದೆಯೇ ಪತ್ನಿ ಸಾವು, ಪುಟ್ಟ ಕಂದನೀಗ ತಬ್ಬಲಿ… ಮನಕಲಕುತ್ತೆ ಈ ಸ್ಟೋರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts