ಮಳೆ ಅವಾಂತರ: ಜೀವ ಭಯದಲ್ಲೇ ಹಗ್ಗ ಕಟ್ಟಿಕೊಂಡು ಹಳ್ಳ ದಾಟುತ್ತಿರುವ ರೈತರು

rain effect
Published on

ಬೀದರ್: ಮಳೆ ನೀರು ತುಂಬಿ ಹರಿಯುತ್ತಿದ್ದರೂ ಹಳ್ಳದ ಎರಡೂ ಬದಿಗೆ ಹಗ್ಗ ಕಟ್ಟಿಕೊಂಡು ರೈತರು, ಮಹಿಳೆಯರು, ವೃದ್ಧರು, ಮಕ್ಕಳು ಜೀವಭಯದಲ್ಲೇ ಹಳ್ಳ ದಾಟುತ್ತಿದ್ದಾರೆ...

ಇದು ಬೀದರ್​ನ ಔರಾನದ ಚಟನಾಳ ಮತ್ತು ನಾಗೂರಾ ಗ್ರಾಮಸ್ಥರ ಕಣ್ಣೀರಿನ ಕಥೆ. ಈ ಭಾಗದಲ್ಲಿ ಧಾರಾಕಾರ ಮಳೆಯಾಗಿದ್ದು, ಸಂಗಮ-ಸಂತಪೂರ ಹಾಗೂ ಸಂತಪೂರ-ನಾಗೂರಾ ಸೇತುವೆ ಕೊಚ್ಚಿಕೊಂಡು ಹೋಗಿದೆ. ಕೃಷಿ ಕೆಲಸಕ್ಕೆ ಹೋಗುವವರು, ಕೂಲಿಕಾರ್ಮಿಕರು, ಕೆಲಸದ ನಿಮಿತ್ತ ಹೊರ ಹೋಗಬೇಕಿರುವವರು ಅನಿವಾರ್ಯವಾಗಿ ಅಪಾಯಕಾರಿ ಹಳ್ಳವನ್ನ ಜೀವಭಯದಲ್ಲೇ ದಾಟುತ್ತಿದ್ದಾರೆ.

ಚಟನಾಳ ಮತ್ತು ನಾಗೂರ ಗ್ರಾಮಸ್ಥರಿಗೆ ಸಂಪರ್ಕ ಕಲ್ಪಿಸುವ ಈ ಹಳ್ಳಕ್ಕೆ ಒಂದು ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪ್ರತಿವರ್ಷ ಮಳೆಗಾಲದಲ್ಲಿ ಜೀವದ ಗ್ರಾಮಸ್ಥರು ಜೀವದ ಹಂಗು ತೊರೆದು ಈ ಭಾಗದಲ್ಲಿ ಓಡಾಡಬೇಕಿದೆ. ಇದಕ್ಕೆ ಇನ್ನಾದರೂ ಮುಕ್ತಿಕೊಡಿ ಎಂದು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net