

ಚಿಕ್ಕಬಳ್ಳಾಪುರ: ವೀಕೆಂಡ್ ಹಿನ್ನೆಲೆ ಪ್ರವಾಸಿತಾಣ ನಂಧಿ ಗಿರಿಧಾಮಕ್ಕೆ ಇಂದು ಬೆಳ್ಳಂಬೆಳಗ್ಗೆ ಸಾವಿರಾರು ಮಂದಿ ಆಗಮಿಸಿದ್ದಾರೆ. ಸೂರ್ಯೋದಯಕ್ಕೂ ಮುನ್ನವೇ ನೂರಾರು ಬೈಕ್ ಮತ್ತು ಕಾರಿನಲ್ಲಿ ನಂದಿ ಹಿಲ್ಸ್ಗೆ ಬಂದಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು.
ನಾ ಮುಂದು, ತಾ ಮುಂದು ಎಂಬಂತೆ ಬರುತ್ತಿದ್ದ ಬಹುತೇಕ ಪ್ರವಾಸಿಗರು ಮಾಸ್ಕ್, ಹೆಲ್ಮೆಟ್ ಧರಿಸದೆ ಬಂದಿದ್ದರು. ನಂದಿ ಗಿರಿಧಾಮದ ಚೆಕ್ ಪೋಸ್ಟ್ ಬಳಿ ಅವರನ್ನೆಲ್ಲ ತಡೆದ ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ದಂಡ ವಸೂಲಿ ಮಾಡಿದರು. ಮಿರರ್ ಇಲ್ಲದ ಬೈಕ್ಗಳಿಗೂ ದಂಡ ವಿಧಿಸಿದರು.
ಕೆಲವರು ದಂಡ ಕಟ್ಟಲು ಆಗದೆ, ನಂದಿ ಗಿರಿಧಾಮ ನೊಡದೆ ವಾಪಸ್ ಆಗುತ್ತಿದ್ದ ದೃಶ್ಯ ಕಂಡು ಬಂತು.