ಮದ್ವೆಯಾದ 11ನೇ ದಿನಕ್ಕೆ ವರ ಸಾವು, ವಧುವಿನ ಸ್ಥಿತಿ ಚಿಂತಾಜನಕ! ಕುಟುಂಬಸ್ಥರ ಗೋಳಾಟ ನೋಡಲಾಗ್ತಿಲ್ಲ

New Project(12)
Published on

ತುರುವೇಕೆರೆ: ಮದ್ವೆಯಾದ 11 ದಿನಕ್ಕೆ ವರ ದುರಂತ ಅಂತ್ಯ ಕಂಡಿದ್ದು, ವಧುವಿನ ಸ್ಥಿತಿ ಚಿಂತಾಜನಕವಾಗಿದೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಶೋಕ ಮಡುಗಟ್ಟಿದ್ದು, ಕುಟುಂಬಸ್ಥರ ಗೋಳಾಟ ನೋಡಿದ್ರೆ ಕರುಳು ಹಿಂಡುತ್ತೆ.

ಅರಸೀಕೆರೆ ತಾಲೂಕು ಕಾಮ್ಲಾಪುರದ ನಂಜುಂಡಯ್ಯ ಅವರ ಪುತ್ರ ಪ್ರಸನ್ನಗೂ ಮತ್ತು ಮಂದಾರಗೂ 10 ದಿನದ ಹಿಂದೆ ಮದುವೆ ಆಗಿತ್ತು. ಪ್ರಸನ್ನ ಮತ್ತು ಮಂದಾರ ಕಾಮ್ಲಾಪುರದಿಂದ ಮನೆಗೆ ಬೇಕಾದ ವಸ್ತುಗಳನ್ನು ಕೊಂಡುಕೊಂಡು ಹಾಲಿ ವಾಸವಾಗಿರುವ ಬೆಂಗಳೂರಿನ ಸರ್ಜಾಪುರ ರಸ್ತೆಯ ಕೈಗೊಂಡನಹಳ್ಳಿಗೆ ಕಾರಿನಲ್ಲಿ ಗುರುವಾರ ತೆರಳುತ್ತಿದ್ದರು. ಲಾರಿ ರೂಪದಲ್ಲಿ ಬಂದ ಜವರಾಯ, ನವವಿವಾಹಿತರ ಬಾಳಿಗೆ ಕೊಳ್ಳಿ ಇಟ್ಟಿದ್ದಾನೆ.

ತುಮಕೂರು ಜಿಲ್ಲೆ ತುರುವೇಕರೆ ತಾಲೂಕಿನ ಮಾಯಸಂದ್ರ ಹೋಬಳಿಯ ಚಿಕ್ಕಶೆಟ್ಟಿಕೆರೆ ಬಳಿ ನವವಿವಾಹಿತರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ನವವಿವಾಹಿತ ಪ್ರಸನ್ನ(27) ಮತ್ತು ಕಾರು ಚಾಲಕ ಬೆಂಗಳೂರಿನ ಕೈಗೊಂಡನಹಳ್ಳಿಯ ಚನ್ನಯ್ಯ(32) ಸ್ಥಳದಲ್ಲೇ ಮೃತಪಟ್ಟರೆ, ಸಂತೋಷ್​ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಪ್ರಸನ್ನನ ಪತ್ನಿ ಮಂದಾರ ತೀವ್ರ ಗಾಯಗೊಂಡು ಆದಿಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರು ಜಖಂಗೊಂಡಿದ್ದು, ಲಾರಿಯ ಒಂದು ಭಾಗ ನಜ್ಜುಗುಜ್ಜಾಗಿದೆ. ಲಾರಿ ಚಾಲಕ ಪರಾರಿಯಾಗಿದ್ದು, ತುರುವೇಕರೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net