ನನ್ನನ್ನು ಉಚ್ಛಾಟಿಸಿದ್ದು ಸಂತಸದ ವಿಷಯ, ಡಿಸೆಂಬರ್​ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವೆ: ಗುಬ್ಬಿ ಶಾಸಕ

gubbi srinivas hdk
Published on

ತುಮಕೂರು: ಜೆ‌ಡಿಎಸ್​ನಿಂದ ನನ್ನನ್ನು ಉಚ್ಛಾಟಿಸಿದ್ದರಲ್ಲಿ ಹೊಸದೇನಿಲ್ಲ. ಉಚ್ಛಾಟನೆ ಮಾಡಿದ್ದು ನನಗೆ ಸಂತೋಷವಾಗಿದೆ. ಡಿಸೆಂಬರ್​ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಉಚ್ಛಾಟಿತ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಗುರುವಾರ ಮಾತನಾಡಿದ ಶ್ರೀನಿವಾಸ್​, ಈ ಬೆಳವಣಿಗೆ ಮುಜುಗರ ಅಥವಾ ಅವಮಾನ ಎಂದು ನನಗೆ ಅನಿಸೋದಿಲ್ಲ. ಅವರು ನನ್ನ ವಿರುದ್ಧ ಅಭ್ಯರ್ಥಿಯನ್ನು ತಯಾರು ಮಾಡಿದಾಗಲೇ ನಾನು ಉಚ್ಛಾಟಿತನಾಗಿದ್ದೆ. ಡಿಸೆಂಬರ್​​ನಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಳಿಕ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿರುಗೇಟು ಕೊಟ್ಡರು. ವಿಪ್ ಉಲ್ಲಂಘನೆಯಾಗಿದ್ರೆ ಸದನದಲ್ಲಿ ಕ್ರಮ ಕೈಗೊಳ್ಳಬಹುದು ಎಂದು ಜೆಡಿಎಸ್​ ವರಿಷ್ಠರಿಗೆ ಗುಬ್ಬಿ ಶಾಸಕ ಸವಾಲು ಹಾಕಿದರು.

ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಕೋಲಾರ ಶಾಸಕ ಕೆ.ಶ್ರೀನಿವಾಸ ಗೌಡ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರನ್ನು ಜೆಡಿಎಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಬುಧವಾರ ಉಚ್ಛಾಟನೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net