ಕರೊನಾಗೆ ಸರ್ಕಾರಿ ಆಸ್ಪತ್ರೆ ವೈದ್ಯ ಡಾ. ಮಂಜುನಾಥ್ ಬಲಿ

corona death
Published on

ತುಮಕೂರು: ಮಹಾಮಾರಿ ಕರೊನಾ ಮಣಿಸಲು ಪ್ರಾಣವನ್ನೇ ಪಣಕ್ಕಿಟ್ಟು ಇಡೀ ವೈದ್ಯಲೋಕವೇ ಹೋರಾಡುತ್ತಿದೆ. ಈ ನಡುವೆ ಸೋಂಕಿಗೆ ಸಾಯುತ್ತಿರುವ ವೈದ್ಯರ ಸರಣಿ ಮುಂದುವರಿದಿದೆ. ಇದೀಗ ಮತ್ತೊಬ್ಬ ವೈದ್ಯ ಕರೊನಾಗೆ ಬಲಿಯಾಗಿದ್ದಾರೆ.

ತುಮಕೂರು ತಾಲೂಕಿನ ಊರ್ಡಿಗೆರೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಮಂಜುನಾಥ್(45) ಮೃತರು. ಇವರಿಗೆ ವಾರದ ಹಿಂದೆ ಕರೊನಾ ಸೋಂಕು ತಗುಲಿತ್ತು. ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು‌. ಚಿಕಿತ್ಸೆ ಫಲಕಾರಿಯಾಗದೆ ಇಂದು(ಶುಕ್ರವಾರ) ಕೊನೆಯುಸಿರೆಳೆದರು. ಇವರು ಮೂಲತಃ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದವರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net