ಒಡಹುಟ್ಟಿದ ತಂಗಿ ಮೇಲೆ ಅಣ್ಣನಿಂದಲೇ ನಿರಂತರ ಅತ್ಯಾಚಾರ: ತಂದೆ-ತಾಯಿ ಇಲ್ಲದ ತಬ್ಬಲಿ ಬಾಳನ್ನೇ ಹಾಳು ಮಾಡಿಬಿಟ್ಟ

rape-4
Published on

ಮೈಸೂರು: ಇಲ್ಲೊಬ್ಬ ಕಾಮುಕ ಒಡಹುಟ್ಟಿದ ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರವೆಸಗಿದ್ದು, ಆಕೆಯನ್ನ ಗರ್ಭಿಣಿ ಮಾಡಿದ್ದಾನೆ.

ಇಂತಹ ಹೇಯ ಕೃತ್ಯ ಸಾಂಸ್ಕೃತಿಕ ನಗರಿ ಮೈಸೂರಿನ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ತಂದೆ-ತಾಯಿ ಇಬ್ಬರೂ ಕೆಲವು ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರೊಂದಿಗೆ ಬಾಲಕಿ ಬೆಳೆದಿದ್ದಳು. ಅಕ್ಕಂದಿರಿಗೆ ಮದುವೆಯಾದ ಬಳಿಕ ಅಣ್ಣಂದಿರ ಆಶ್ರಯದಲ್ಲಿದ್ದಳು. ಇಬ್ಬರು ಅಣ್ಣಂದಿರ ಪೈಕಿ ಓರ್ವ ಕುಡಿತ ಚಟ ಅಂಟಿಸಿಕೊಂಡಿದ್ದ. ನಿತ್ಯ ಮನೆಗೆ ಕುಡಿದುಕೊಂಡು ಬರುತ್ತಿದ್ದ ಈತ, ಮನೆಯಲ್ಲಿದ್ದ ತಂಗಿ ಮೇಲೆ ಮೂರು ತಿಂಗಳಿಂದ ನಿರಂತರವಾಗಿ ಅತ್ಯಾಚಾರವೆಸಗಿದ್ದ.

ಅಣ್ಣನಿಂದಲೇ ಅತ್ಯಾಚಾರಕ್ಕೊಳಗಾದ ಬಾಲಕಿ ಗರ್ಭಿಣಿಯಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯನ್ನ ಆಸ್ಪತ್ರೆಗೆ ದಾಖಲಿಸಿದ್ದು, ಆರೋಪಿ ಅಣ್ಣನ ವಿರುದ್ಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ. ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net