ಭಾರಿ ಮಳೆಯಿಂದ ತುಂಬಿ ಹರಿದ ಹಳ್ಳ; ಬಂಡಿ ಸಮೇತ ಕೊಚ್ಚಿಹೋದ ರೈತ, ಬಚಾವಾದ ಎತ್ತುಗಳು..

19-nlg-1 rain
ಸಾಂದರ್ಭಿಕ ಚಿತ್ರ
Published on

ಕೊಪ್ಪಳ: ರಾಜ್ಯದ ಹಲವೆಡೆ ಭಾರಿ ಮಳೆಯಾಗುತ್ತಿದ್ದು, ಕೆಲವೆಡೆ ಪ್ರವಾಹ ಉಂಟಾಗಿ, ವಸತಿ ಪ್ರದೇಶಗಳು ಕೂಡ ಜಲಾವೃತವಾಗಿ ಸಾರ್ವಜನಿಕರನ್ನು ಕಂಗೆಡಿಸಿವೆ. ಕೆಲವೆಡೆ ಕಟ್ಟಡ ಕುಸಿತದಿಂದಾಗಿ ಸಾವು-ನೋವು ಕೂಡ ಸಂಭವಿಸಿದೆ. ಈ ಮಧ್ಯೆ ಹಳ್ಳವೊಂದರಲ್ಲಿ ರೈತ ಕೊಚ್ಚಿಹೋಗಿದ್ದು, ಶವ ಪತ್ತೆಯಾಗಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ಹಿರೇ ಮನ್ನಾಪುರ ಗ್ರಾಮದಲ್ಲಿ ಈ ಅವಘಡ ಸಂಭವಿಸಿದೆ. ಇಲ್ಲಿನ ಬುಡ್ನೇಸಾಬ (65) ಎಂಬ ರೈತ ನೀರುಪಾಲಾಗಿದ್ದಾರೆ. ಇವರು ಹೊಲದಿಂದ ಮನೆಗೆ ಎತ್ತಿನ ಬಂಡಿಯಲ್ಲಿ ವಾಪಸಾಗುತ್ತಿದ್ದಾಗ ಬಂಡಿ ಸಮೇತ ಕೊಚ್ಚಿಕೊಂಡು ಹೋಗಿದ್ದರು.

ಭಾರಿ ಮಳೆಯಿಂದ ಹಳ್ಳದಲ್ಲಿ ಪ್ರವಾಹ ಉಂಟಾಗಿ ಎತ್ತಿನಬಂಡಿ ಕೊಚ್ಚಿಕೊಂಡು ಹೋಗಿತ್ತು. ಆದರೆ ಬಂಡಿಯ ಎತ್ತುಗಳು ಈಜಿ ಪ್ರಾಣಾಪಾಯದಿಂದ ಪಾರಾಗಿವೆ. ಮತ್ತೊಂದೆಡೆ ರೈತ ನೀರಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದು, ಶವ ಪತ್ತೆಯಾಗಿದೆ. ಕುಷ್ಟಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net