ವರದಕ್ಷಿಣೆ ಕಿರುಕುಳ: ತಿ.ನರಸೀಪುರದಲ್ಲಿ ನವವಿವಾಹಿತೆ ಆತ್ಮಹತ್ಯೆ

dowry case
Published on

ಮೈಸೂರು: ನೂರಾರು ಕನಸಿನೊಂದಿಗೆ 9 ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ 23 ವರ್ಷದ ಯುವತಿ ಗಂಡನ ಮನೆಯಲ್ಲೇ ದುರಂತ ಅಂತ್ಯ ಕಂಡಿದ್ದಾಳೆ.

ತಿ.ನರಸೀಪುರದ ಟಿ.ಮರಳ್ಳಿ ಗ್ರಾಮದ ದಿವ್ಯಾ(23) ಮೃತ ದುರ್ದೈವಿ. ಬೆಂಗಳೂರಿನಲ್ಲಿ ಹಸು ಸಾಕಿಕೊಂಡಿದ್ದ ದೀಪಕ್ ಎಂಬಾತನ ಜತೆ 9 ತಿಂಗಳ ಹಿಂದೆ ದಿವ್ಯಾ ಮದುವೆ ಆಗಿತ್ತು. ಮದುವೆ ನಂತರ ತಿ.ನರಸೀಪುರದಲ್ಲೇ ವಾಸವಿದ್ದ ದೀಪಕ್​, ಕುಡಿತ ಚಟ ಅಂಟಿಸಿಕೊಂಡಿದ್ದ. ತನ್ನ ಪಾಲಿನ ಆಸ್ತಿ ಕೊಡುವಂತೆ ತಂದೆ ಬಳಿ ಜಗಳ ಮಾಡಿದ್ದ. ದಾರಿ ತಪ್ಪಿದ್ದ ಮಗನಿಗೆ ಆಸ್ತಿ ಕೊಡಲು ತಂದೆ ನಿರಾಕರಿಸಿದ್ದರು.

ತಂದೆ ಆಸ್ತಿ ಕೊಡಲಿಲ್ಲ ಎಂದು ಕುಪಿತಗೊಂಡಿದ್ದ ದೀಪಕ್​, ವರದಕ್ಷಿಣೆ ತರುವಂತೆ ಪತ್ನಿಗೆ ನಿತ್ಯ ಕಿರುಕುಳ ಕೊಡುತ್ತಿದ್ದನಂತೆ. ಗಂಡನ ಕಿರುಕುಳ ಸಹಿಸಲಾಗದೆ ಬೇಸತ್ತ ದಿವ್ಯಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ದಿವ್ಯಾ ಪೋಷಕರು ಆಕೆಯ ಪತಿ, ಅತ್ತೆ, ಮಾವ, ನಾದಿನಿ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪ ಮಾಡಿದ್ದಾರೆ. ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net