

ಬೆಂಗಳೂರು: 120 ಟನ್ ಆಕ್ಸಿಜನ್ ತುಂಬಿದ್ದ ಟ್ಯಾಂಕರ್ಗಳನ್ನು ಹೊತ್ತುಕೊಂಡು ನಿನ್ನೆ ಜೆಮ್ಶೆಡ್ ಪುರದಿಂದ ಹೊರಟ್ಟಿದ್ದ ರೈಲು ಇಂದು(ಮಂಗಳವಾರ) ರಾಜ್ಯ ರಾಜಧಾನಿ ಬೆಂಗಳೂರಿಗೆ ಸುರಕ್ಷಿತವಾಗಿ ತಲುಪಿದೆ.
ಆಕ್ಸಿಜನ್ ಸ್ಪೆಷಲ್ ವಿಶೇಷ ರೈಲಿನಲ್ಲಿ 120 ಟನ್ ಅಕ್ಸಿಜನ್ ಕರ್ನಾಟಕಕ್ಕೆ ಬರುತ್ತಿದ್ದಂತೆ ಬೆಂಗಳೂರು ಸೇರಿದಂತೆ ರಾಜ್ಯದ ಜನತೆಗೆ ಕೊಂಚ ನೆಮ್ಮದಿ ತರಿಸಿದೆ.
ಗ್ರೀಮ್ ಕಾರಿಡಾರ್ಗಳ ಮೂಲಕ ಜೆಮ್ಶೆಡ್ಪುರದಿಂದ ನಿನ್ನೆ ಬೆಳಗಿನ ಜಾವ ಹೊರಟ ಈ ರೈಲು 30 ತಾಸಿನ ಬಳಿಕ ಇಂದು ಬೆಳಗ್ಗೆ 9.30ಕ್ಕೆ ವೈಟ್ ಫೀಲ್ಡ್ ರೈಲ್ವೆ ನಿಲ್ದಾಣಕ್ಕೆ ತಲುಪಿತು. ಇದು ಬೆಂಗಳೂರಿಂದ ರಾಜ್ಯದ ಬೇರೆ ಬೇರೆ ಭಾಗಗಳಿಗೆ ಆಕ್ಸಿಜನ್ ರವಾನಿಸಲಾಗುತ್ತೆ.