ಕರೊನಾಗೆ ತಂದೆ, ಮಗಳು, ಅಳಿಯ ಬಲಿ!

corona death case
Published on

ಮಂಗಳೂರು: ಮಹಾಮಾರಿ ಕರೊನಾ ತಂದೊಡ್ಡುತ್ತಿರುವ ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ಕೋಟ್ಯಂತರ ಜನರ ಬದುಕನ್ನ ಮೂರಾಬಟ್ಟೆ ಮಾಡಿರುವ ಈ ಸೋಂಕು ಹಲವರನ್ನು ತಬ್ಬಲಿ ಮಾಡಿದೆ. ಇಡೀ ಕುಟುಂಬವನ್ನೂ ಬಲಿ ಪಡೆದಿದೆ. ಇದೀಗ ಕರೊನಾಗೆ ಒಂದೇ ಕುಟುಂಬದ ಮೂವರ ಪ್ರಾಣಹೋಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಾಂಧಿನಗರದಲ್ಲಿ ಸಂಭವಿಸಿದೆ.

ಪುರಲ್ಲ (92), ಇವರ ಮಗಳು ಅಪ್ಪಿ (45) ಮತ್ತು ಅಪ್ಪಿಯ ಗಂಡ ಗುರುವ (52) ಮೃತ ದುರ್ದೈವಿಗಳು. ತಂದೆ, ಮಗಳು ಮತ್ತು ಅಳಿಯನ ಸಾವಿಂದ ಇಡೀ ಮನೆ ಶೋಕಸಾಗರದಲ್ಲಿ ಮುಳುಗಿದೆ.

ಕೋವಿಡ್ ಸೋಂಕು ತಗುಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುರಲ್ಲ ಮೇ 13ರಂದು ಕೊನೆಯುಸಿರೆಳೆದರು. ಇದಾದ 10 ದಿನಕ್ಕೆ ಅಂದರೆ ಮೇ 32ರಂದು ಇವರ ಮಗಳು ಮಗಳು ಅಪ್ಪಿ ಕೂಡ ಕರೊನಾಗೆ ಬಲಿಯಾದರು. ಪತ್ನಿ ಸತ್ತ 5 ದಿನಕ್ಕೆ ಗಂಡ ಗುರುವ ಕೂಡ ಮೃತಪಟ್ಟಿದ್ದಾರೆ. ಒಂದೇ ಕುಟುಂಬದ ಮೂವರ ಸಾವಿನಿಂದ ಕುಟುಂಬಸ್ಥರ ಗೋಳಾಟ ಮುಗಿಲು ಮುಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net