ನನ್ನನ್ನು ಸೋಲಿಸಿ ಈಗ ಟಿಕೆಟ್‌ ಕೇಳೋಕೆ ಬಂದಿದ್ದೀರಾ? ನಾಚಿಕೆ ಆಗಲ್ವಾ ನಿಮ್ಗೆ? ನಡೀರಿ ನಡೀರಿ ಅತ್ಲಾಗಿ..

ನನ್ನನ್ನು ಸೋಲಿಸಿ ಈಗ ಟಿಕೆಟ್‌ ಕೇಳೋಕೆ ಬಂದಿದ್ದೀರಾ? ನಾಚಿಕೆ ಆಗಲ್ವಾ ನಿಮ್ಗೆ? - youtube
Published on

ಮೈಸೂರು: ಎಲ್ಲಾ ನನ್ನನ್ನು ಸೋಲಿಸಿ ಈಗ ಹೇಳಕ್ ಬಂದಿದ್ದೀರಾ? ನಾಚಿಕೆ ಆಗಲ್ವಾ ನಿಮ್ಗೆ? ನಿಮ್ಮ ಆತ್ಮ ಮುಟ್ಟಿಕೊಂಡು ಹೇಳಿ, ನನ್ನನ್ನು ಸೋಲಿಸಿಲ್ಲ ಅಂತಾ... ನನ್ನನ್ನು ಸೋಲಿಸಿ ಈಗ ಟಿಕೆಟ್‌ ಕೇಳೋಕೆ ಬಂದಿದ್ದೀರಾ? ನಾಚಿಕೆ ಆಗಲ್ವಾ ನಿಮ್ಗೆ? ನಡೀರಿ ನಡೀರಿ ಅತ್ಲಾಗಿ... ಯಾರಿಗೆ ಏನು ಕೊಡಬೇಕು ಅಂತ ಗೊತ್ತಿದೆ ಹೋಗ್ರೀ...

ಇದು ಕೆ.ಮರೀಗೌಡ ಅಭಿಮಾನಿಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡ ಪರಿ. ಮೈಸೂರಿನಲ್ಲಿ ಸಿದ್ದರಾಮಯ್ಯ ನಿವಾಸದ ಬಳಿ ಶುಕ್ರವಾರ ಜಮಾಯಿಸಿದ್ದ ಮರಿಗೌಡ ಅಭಿಮಾನಿಗಳು, ಸಿದ್ದರಾಮಯ್ಯರ ಕಾರನ್ನು ಅಡ್ಡಗಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮರೀಗೌಡಗೆ ಎಂಎಲ್ಸಿ ಟಿಕೆಟ್ ಕೊಡಿ ಎಂದು ಕೇಳಿದರು. ಆ ವೇಳೆ ಗರಂ ಆದ ಸಿದ್ದರಾಮಯ್ಯ ಮಾಸ್ಕ್ ತೆಗೆದು, ಯಾರಿಗೆ ಏನು ಕೊಡಬೇಕು ಅಂತಾ ಗೊತ್ತಿದೆ. ನನ್ನನ್ನು ಸೋಲಿಸಿ ಈಗ ಟಿಕೆಟ್‌ ಕೇಳೋಕೆ ಬಂದಿದ್ದೀರಾ? ನಾಚಿಕೆ ಆಗಲ್ವಾ ನಿಮ್ಗೆ? ನಡೀರಿ ನಡೀರಿ ಅತ್ಲಾಗಿ... ಎಂದು ಸಿಡಿಮಿಡಿಗೊಂಡರು. ಮರೀಗೌಡ ಅಭಿಮಾನಿಗಳು ಸರ್​ ನಾವು ಸೋಲಿಸಿಲ್ಲ ಎಂದು ಹೇಳಿದರೂ ಸಿದ್ದರಾಮಯ್ಯರ ಕೋಪ ಮಾತ್ರ ಕಡಿಮೆ ಆಗಲೇ ಇಲ್ಲ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಂಡ ಸೋಲು ಸಿದ್ದರಾಮಯ್ಯಗೆ ಹೆಜ್ಜೆ ಹೆಜ್ಜೆಗೂ ಕಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net