

ಬೆಂಗಳೂರು: ಒಂದು ಕುಟುಂಬಕ್ಕೆ ಒಂದೇ ಟಿಕೆಟ್, 50 ವರ್ಷದೊಳಗಿನವರಿಗೆ ಮುಂದಾಳತ್ವ, ಒಬ್ಬರಿಗೆ ಒಂದೇ ಹುದ್ದೆಯಂತಹ ಪ್ರಮುಖ ತೀರ್ಮಾನ ಕೈಗೊಂಡ ಉದಯಪುರ ಎಐಸಿಸಿ ಚಿಂತನಾ ಶಿಬಿರದ ರ್ನಿಣಯವನ್ನು ರಾಜ್ಯದಲ್ಲಿ ಅನುಷ್ಠಾನಗೊಳಿಸುವ ಕಾಂಗ್ರೆಸ್ನ ನವ ಸಂಕಲ್ಪ ಶಿಬಿರ ಗುರುವಾರ ಆರಂಭಗೊಂಡಿದೆ. ದೇವನಹಳ್ಳಿಯ ರೆಸಾರ್ಟ್ನಲ್ಲಿ ನಡೆಯುತ್ತಿರುವ ಈ ಶಿಬಿರ ಶುಕ್ರವಾರವೂ ನಡೆಯಲಿದೆ. ಮೊದಲ ದಿನದ ಸಭೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಹೈಕಮಾಂಡ್ನ ಮಹತ್ವದ ಸಂದೇಶವನ್ನ ಸಭೆಗೆ ರವಾನಿಸಿದರು.