More

    ಬೆಂಗಳೂರಲ್ಲಿ ಬಿಕಾಂ ವಿದ್ಯಾರ್ಥಿ ಆತ್ಮಹತ್ಯೆ: ಸಾವಿಗೂ ಮುನ್ನ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ Sorry… ಎಂದು ಬರೆದಿದ್ದೇಕೆ?

    ಬೆಂಗಳೂರು: ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ “Sorry” ಎಂದು ಬರೆದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ್ಞಾನಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ಬುಧವಾರ ರಾತ್ರಿ ನಡೆದಿದೆ.

    ಮನೋಜ್ ಮೃತ ದುರ್ದೈವಿ. ನಗರದ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿದ್ದ. ಮೂರ್ನಾಲ್ಕು ದಿನದಿಂದ ಡಿಪ್ರೆಷನ್​ನಲ್ಲಿದ್ದ ಮನೋಜ್​, ಬುಧವಾರ ರಾತ್ರಿ ತನ್ನ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಅಲ್ಲದೇ ”Sorry, chill we all die” ಎಂದು ಬರೆದುಕೊಂಡಿದ್ದ. ಬಳಿಕ ಮನೆಯಲ್ಲಿದ್ದ ಫ್ಯಾನಿಗೆ ನೇಣುಬಿಗಿದುಕೊಂಡು ಮೃತಪಟ್ಟಿದ್ದಾನೆ.

    ಮನೋಜ್ ಮನೆ ಪಕ್ಕದಲ್ಲೇ ಅಜ್ಜಿ ಮನೆ ಇದೆ. ಪ್ರತಿ‌ ದಿನ ಅಜ್ಜಿಯ ಮನೆಗೆ ಹೋಗಿ ಮನೋಜ್ ಮಲಗುತ್ತಿದ್ದ. ಬುಧವಾರ ರಾತ್ರಿ ಕೂಡ ಊಟ ಮುಗಿಸಿ ಮಲಗಲು ಅಜ್ಜಿ ಮನೆಗೆ ಹೋಗಿದ್ದ. ಇಂದು ಬೆಳಗ್ಗೆ 7.30 ಆದರೂ ಮನೋಜ್​ ರೂಮಿನಿಂದ ಹೊರ ಬಂದಿರಲಿಲ್ಲ. ಬಾಗಿಲನ್ನೂ ತೆಗೆದಿರಲಿಲ್ಲ. ಕಾಲೇಜಿಗೆ ಹೋಗಲು ರೆಡಿ ಆಗಿಲ್ವಾ? ಎನ್ನುತ್ತಾ ಪೋಷಕರು ಕೂಗಿದರೂ ಮನೋಜ್​ ಬಾರದಿದ್ದಾಗ ಅನುಮಾನಗೊಂಡ ಪೋಷಕರು ಬಾಗಿಲು ಒಡೆದು ಒಳ ಹೋದಾಗ ಮನೋಜ್​ ಶವವಾಗಿದ್ದ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಯಿತು. ಆತ್ಮಹತ್ಯೆಗೆ ಕಾರಣ ಏನೆಂದು ಇನ್ನೂ ತಿಳಿದಿಲ್ಲ. ಸಾವಿಗೂ ಮುನ್ನ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ‘Sorry…’ ಎಂದು ಬರೆದಿದ್ದೇಕೆ? ಯಾರಿಗೆ ಕ್ಷಮೆ ಕೇಳಿದ್ದು? ಎಂಬುದು ಅನುಮಾನ ಮೂಡಿಸಿದೆ.

    ಹೆತ್ತ ತಾಯಿಯ ಜುಟ್ಟು ಹಿಡಿದು ಕೊಟ್ಟು ಬಿಡುತ್ತೇವೆ… ಪಠ್ಯ ವಾಪಸ್​ ಅಭಿಯಾನಕ್ಕೆ ಟಾಂಗ್​ ಕೊಟ್ಟ ಎಸ್.ಎಲ್.ಭೈರಪ್ಪ

    ಶಿಕ್ಷಣ ಸಚಿವ ನಾಗೇಶ್​ರ ಮನೆಗೆ ಮುತ್ತಿಗೆ ಹಾಕಿ ಚಡ್ಡಿ ಸುಟ್ಟು ಹಾಕಿದ್ರು… ಅವರಿಗೆ ಗುಂಡಿಕ್ಕಬೇಕು: ಸೊಗಡು ಶಿವಣ್ಣ ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts