More

    ಹೆತ್ತ ತಾಯಿಯ ಜುಟ್ಟು ಹಿಡಿದು ಕೊಟ್ಟು ಬಿಡುತ್ತೇವೆ… ಪಠ್ಯ ವಾಪಸ್​ ಅಭಿಯಾನಕ್ಕೆ ಟಾಂಗ್​ ಕೊಟ್ಟ ಎಸ್.ಎಲ್.ಭೈರಪ್ಪ

    ಮೈಸೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಕುರಿತು ಸುದ್ದಿಗೋಷ್ಠಿ ನಡೆಸಿದ ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್.ಎಲ್.ಭೈರಪ್ಪ, ಪಠ್ಯ ವಾಪಸ್​ ಅಭಿಯಾನದಲ್ಲಿ ಪಾಲ್ಗೊಂಡವರಿಗೆ ಟಾಂಗ್​ ಕೊಟ್ಟಿದ್ದಾರೆ.

    ಪಠ್ಯ ಪುಸ್ತಕದಲ್ಲಿ ಪ್ರಾಮಾಣಿಕವಾದದ್ದು ಯಾವುದು? ಪಠ್ಯದಲ್ಲಿ ಸತ್ಯ ಇರಬೇಕು. ನಿಮ್ಮ ಐಡಿಯಾಲಜಿಗಳು ಇರಬಾರದು. ನಾನು ಲೇಖಕ, ಕಾರ್ಯಕರ್ತ ಅಲ್ಲ. ವಾಜಪೇಯಿ ಕಾಲದಲ್ಲೂ ಪಠ್ಯ ಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದರು. ಆಗ ಸಾಹಿತಿಗಳು ದೇಶದ ತುಂಬೆಲ್ಲ “ಪ್ರಶಸ್ತಿ ವಾಪ್ಸಿ” ಚಳವಳಿ ಶುರು ಮಾಡಿದರು. ಪ್ರಶಸ್ತಿ ಜತೆಗೆ ಹಣವನ್ನೂ ವಾಪಸ್ ಕೊಡಿ ಅಂತ ಸಲಹೆ ಕೊಟ್ಟಿದ್ದೆ. 15 ದಿನಗಳಲ್ಲಿ ಎಲ್ಲರೂ ಸುಮ್ಮನಾಗಿದ್ದರು ಎಂದು ಎಸ್‌.ಎಲ್.ಭೈರಪ್ಪ ವಿವರಿಸಿದರು.

    ಚುನಾವಣೆ ಬಂತು ಅಂದರೆ ಏನು ಬೇಕಾದರೂ ಮಾಡುತ್ತೇವೆ ಎಂದು ಬೇಸರ ಹೊರಹಾಕಿದ ಎಸ್.ಎಲ್‌.ಭೈರಪ್ಪ ಬೇಸರ‌, ಪ್ರಜಾಪ್ರಭುತ್ವಕ್ಕಾಗಿ ಎಲೆಕ್ಷನ್ ನಡೆಯಬೇಕು. ಆದರೆ ಎಲೆಕ್ಷನ್ ಬಂತು ಅಂದ್ರೆ ನಾವು ಏನು ಬೇಕಾದರೂ ಮಾಡುತ್ತೇವೆ. ಹೆತ್ತ ತಾಯಿಯ ಜುಟ್ಟು ಹಿಡಿದು ಕೊಟ್ಟು ಬಿಡುತ್ತೇವೆ ಎಂದರು.

    ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಕೊಡಗಿನವರು. ಟಿಪ್ಪು ಕೊಡಗು ಜಿಲ್ಲೆಯಲ್ಲಿ ಏನೆಲ್ಲಾ ಮಾಡಿದ ಅನ್ನೋದು ಕಾರ್ಯಪ್ಪಗೆ ಗೊತ್ತು. ಅದನ್ನು ಭಾಷಣದಲ್ಲಿ ಪ್ರಸ್ತಾಪ ಮಾಡಿದರು. ಇದರಿಂದ ಸಿಟ್ಟಾದ ಮಾಜಿ ನಿರ್ದೇಶಕರು ಸಿಎಂಗೆ ಪತ್ರ ಬರೆದರು, ಚಳವಳಿ ಶುರು ಮಾಡಿದರು. ಸ್ವಲ್ಪ ದಿನಗಳ ನಂತರ ಎಲ್ಲರೂ ಸುಮ್ಮನಾದರು. ನಾಟಕ ಇರೋದು ಚಳವಳಿ ಮಾಡೋಕೆ. ಕಾವ್ಯ, ಕಾದಂಬರಿ ಹೇಗೆ ರಸಾನುಭವವೋ ಹಾಗೆಯೇ ನಾಟಕ ಕೂಡ ರಸಾನುಭವ. ಅಡ್ಡಂಡ ಕಾರ್ಯಪ್ಪರನ್ನು ತೆಗೆದು ಹಾಕಲು ಚಳವಳಿ ಮಾಡಿದವರಿಗೆ ಸಾಧ್ಯ ಆಗಲಿಲ್ಲ. ಟಿಪ್ಪು ವಿಚಾರದಲ್ಲಿ ಲೆಫ್ಟಿಸ್ಟು, ಮುಸ್ಲಿಂಗಳು ಅವರದ್ದೇ ಐಡಿಯಾಲಜಿ ಮಾಡುತ್ತಾರೆ. ಟಿಪ್ಪು ಎಕ್ಸ್‌ಪ್ರೆಸ್‌ ರೈಲಿನ ಹೆಸರು ಬದಲಿಸಬೇಕು ಅಂತ ಪ್ರತಾಪ್ ಸಿಂಹ ಹೇಳಿದರು. “ಟಿಪ್ಪುವಿನ ನಿಜ ಸ್ವರೂಪ” ಪುಸ್ತಕವನ್ನು ಯಾರೂ ಓದುವುದಿಲ್ಲ ಎಂದರು.

    ಗಂಡನನ್ನು ಬಿಟ್ಟು ಬಾ… ಹಾಸನ ಯುವಕನ ಕಾಟಕ್ಕೆ ಶಿವಮೊಗ್ಗದ ವಿವಾಹಿತೆ ಕಂಗಾಲು!

    ರಜೆ ಬೇಕಂದ್ರೆ ಲಾಡ್ಜ್​ಗೆ ಬಂದು ಬಟ್ಟೆ‌ ಬಿಚ್ಚಬೇಕಂತೆ… ಕೊಪ್ಪಳದ ಸರ್ಕಾರಿ ಕಚೇರಿ ಮಹಿಳಾ ಸಿಬ್ಬಂದಿಯ ಕಣ್ಣೀರ ಕಥೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts