More

    ಮುಂಬೈ ವಿವಿ ಸಾಹಿತ್ಯ ಸಂವಾದಕ್ಕೆ ಡಾ.ಎಸ್.ಎಲ್. ಭೈರಪ್ಪ ಮುಖ್ಯ ಅತಿಥಿ; ಕಲಾ ಭಾಗ್ವತ್ ಕೃತಿ ಬಿಡುಗಡೆ, ವಿಶೇಷ ಉಪನ್ಯಾಸ

    ಮುಂಬೈ: ಪದ್ಮಭೂಷಣ, ಸರಸ್ವತಿ ಸಮ್ಮಾನ್​ ಪುರಸ್ಕೃತ ಡಾ.ಎಸ್.ಎಲ್​.ಭೈರಪ್ಪ ಅವರು ಮುಂಬೈ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಹಮ್ಮಿಕೊಂಡಿರುವ ಸಾಹಿತ್ಯ ಸಂವಾದದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಕೃತಿಗಳ ಬಿಡುಗಡೆ, ವಿಶೇಷ ಉಪನ್ಯಾಸ ಕೂಡ ಇರಲಿದೆ.

    ಮುಂಬೈನಲ್ಲಿ ಜು. 21ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯವು ಡಾ.ಎಸ್​.ಎಲ್​.ಭೈರಪ್ಪ ಅವರೊಂದಿಗೆ ಸಾಹಿತ್ಯ ಸಂವಾದ ಏರ್ಪಡಿಸಿದೆ. ಕನ್ನಡ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ.ಜಿ.ಎನ್.ಉಪಾಧ್ಯ ಅಧ್ಯಕ್ಷತೆ ವಹಿಸಲಿದ್ದಾರೆ.

    ‘ವಿಶ್ವಮಾನ್ಯ ಲೇಖಕರಾಗಿ ಭೈರಪ್ಪ’ ಈ ವಿಷಯದ ಕುರಿತು ಪುಣೆಯ ಖ್ಯಾತ ಸಾಹಿತಿ, ವಿಮರ್ಶಕಿ ಡಾ.ಸುಪ್ರಿಯಾ ಸಹಸ್ರಬುದ್ಧೆ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಸಂಶೋಧನಾ ವಿದ್ಯಾರ್ಥಿ ಕಲಾ ಭಾಗ್ವತ್ ಅವರ ‘ಕನ್ನಡ ಸಂಶೋಧನೆಗೆ ಮುಂಬಯಿ ಕೊಡುಗೆ’ ಕೃತಿಯನ್ನು ಡಾ.ಎಸ್.ಎಲ್.ಭೈರಪ್ಪನವರು ಬಿಡುಗಡೆ ಮಾಡಲಿದ್ದಾರೆ. ಕೃತಿಯ ಕುರಿತು ಮುಂಬೈಯ ಸಂಘಟಕ, ಲೇಖಕ, ಮೊಗವೀರ ಮಾಸಿಕದ ಸಂಪಾದಕ ಅಶೋಕ ಸುವರ್ಣ ಮಾತನಾಡಲಿದ್ದಾರೆ.

    ಕಲಾ ಅವರು ಈ ಕೃತಿಯಲ್ಲಿ ಸ್ವಾತಂತ್ರ್ಯಪೂರ್ವದಿಂದ ಹಿಡಿದು ಪ್ರಸ್ತುತದವರೆಗೆ ಮುಂಬೈಯ ಪ್ರಮುಖ ವಿದ್ವಾಂಸರು ಸಂಶೋಧನಾ ಕ್ಷೇತ್ರದಲ್ಲಿ ಮಾಡಿದ ಸಾಧನೆ ಹಾಗೂ ನೀಡಿದ ಕೊಡುಗೆಗಳ ಸ್ಥೂಲವಾದ ವಿಶ್ಲೇಷಣೆಯೊಂದಿಗೆ ಅನೇಕ ವಿವರಗಳನ್ನು ದಾಖಲಿಸಿದ್ದಾರೆ.

    ಮುಂಬೈ ವಿವಿ ಸಾಹಿತ್ಯ ಸಂವಾದಕ್ಕೆ ಡಾ.ಎಸ್.ಎಲ್. ಭೈರಪ್ಪ ಮುಖ್ಯ ಅತಿಥಿ; ಕಲಾ ಭಾಗ್ವತ್ ಕೃತಿ ಬಿಡುಗಡೆ, ವಿಶೇಷ ಉಪನ್ಯಾಸಕನ್ನಡ ವಿಭಾಗದ ವಿದ್ಯಾರ್ಥಿನಿ ನಳಿನಾ ಪ್ರಸಾದ್ ಹಾಗೂ ಕಂಠದಾನ ಕಲಾವಿದರಾಗಿರುವ ಸುರೇಂದ್ರ ಕುಮಾರ್ ಮಾರ್ನಾಡ್ ಅವರಿಂದ ಭೈರಪ್ಪನವರ ಕೃತಿಗಳ ಆಯ್ದ ಭಾಗದ ವಾಚನವೂ ನಡೆಯಲಿದೆ. ಸಂಶೋಧನಾ ವಿದ್ಯಾರ್ಥಿಗಳು ಭೈರಪ್ಪ ಅವರೊಂದಿಗೆ ಸಂವಾದ ನಡೆಸಲಿದ್ದಾರೆ. ಕನ್ನಡ ವಿಭಾಗದ ಸಹಪ್ರಾಧ್ಯಾಪಕಿ ಡಾ.ಪೂರ್ಣಿಮಾ ಸುಧಾಕರ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಲಿರುವರು ಎಂದು ಮುಂಬೈ ವಿವಿ ತಿಳಿಸಿದೆ.

    ಕಲಾ ಚಿದಾನಂದ ಭಾಗ್ವತ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪದ ಹಳದೀಪುರದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ಅವರು ಸಂಗೀತ, ಸಾಹಿತ್ಯ, ಸಾಂಘಿಕ ಚಟುವಟಿಕೆಗಳಲ್ಲಿ ಸಮಾನ ಆಸಕ್ತಿ ಹೊಂದಿದ್ದಾರೆ. ಮುಂಬೈ ವಿಶ್ವವಿದ್ಯಾಲಯದಿಂದ ಪ್ರಥಮ ರ್ಯಾಂಕ್ ಹಾಗೂ ಪ್ರತಿಷ್ಠಿತ ಎಂ.ಬಿ. ಕುಕ್ಯಾನ್ ಬಂಗಾರದ ಪದಕದೊಂದಿಗೆ ಕನ್ನಡ ಎಂ.ಎ ಪದವಿ ಪಡೆದಿರುತ್ತಾರೆ. ಅವರ ಎರಡು ಕೃತಿಗಳು ಈಗಾಗಲೇ ಬೆಳಕು ಕಂಡಿವೆ, ಕವಿತೆ, ಕತೆ, ಬಿಡಿ ಬರಹಗಳು, ವಿಮರ್ಶಾ ಲೇಖನಗಳು, ಶೋಧ ಲೇಖನಗಳು ಪತ್ರಿಕೆಗಳಲ್ಲಿ, ಸಂಪಾದಿತ ಕೃತಿಗಳಲ್ಲಿ ಪ್ರಕಟಗೊಂಡಿವೆ. ಕಲಾ ಪ್ರಸ್ತುತ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಡಾ.ಜಿ.ಎನ್. ಉಪಾಧ್ಯ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಅಧ್ಯಯನ ನಡೆಸುತ್ತಿದ್ದಾರೆ.

    ಈತ ಗಂಡಸಿಯ ಸಾಹಸಿ: ಚಿರತೆಯನ್ನು ಹಿಡಿದು ಬೈಕ್​ಗೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಗೆ ಒಪ್ಪಿಸಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts