ಕೊಬ್ಬರಿ ದರ ಏರಿಕೆ: ಕ್ವಿಂಟಾಲ್ ಕೊಬ್ಬರಿ ಬೆಲೆ ಗರಿಷ್ಠ 17,426 ರೂಪಾಯಿ

dry-coconut-500x500
Published on

ತುಮಕೂರು: ತಿಪಟೂರು ಮಾರುಕಟ್ಟೆಯಲ್ಲಿ ಕೊಬ್ಬರಿಗೆ ಮತ್ತೆ ಉತ್ತಮ ಬೆಲೆ ಸಿಕ್ಕಿದೆ. ಬುಧವಾರ ಎಪಿಎಂಸಿ ಹರಾಜಿನಲ್ಲಿ ಕ್ವಿಂಟಾಲ್ ಕೊಬ್ಬರಿ ಗರಿಷ್ಠ 17426 ರೂಪಾಯಿಗೆ ಮಾರಾಟವಾಗಿದ್ದು, ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಮಳೆ ಬರುತ್ತಿರುವ ಹಿನ್ನೆಯಲ್ಲಿ ಕೊಬ್ಬರಿ ಹಸಿಯಿದ್ದು ಪೂರೈಕೆ ಕಡಿಮೆಯಾಗಿರುವುದು ದರ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. ಉತ್ತರ ಭಾರತೀಯರು ಚಳಿಗಾಲದಲ್ಲಿ ಹೆಚ್ಚು ಕೊಬ್ಬರಿ ಬಳಸಲಿದ್ದು ದರ ಮತ್ತಷ್ಟು ಹೆಚ್ಚಾಗುವ ವಿಶ್ವಾಸ ತೆಂಗು ಸೀಮೆಯಲ್ಲಿದೆ.

ಕಳೆದ ಮೇನಲ್ಲಿ ಕೊಬ್ಬರಿಗೆ ಗರಿಷ್ಠ 18,000 ರೂಪಾಯಿ ದಾಖಲೆ ಬೆಲೆ ಸಿಕ್ಕಿತ್ತು. ಬಳಿಕ ಕೊಬ್ಬರಿ ಬೆಲೆ ಕನಿಷ್ಠ 15,000 ರೂ.ಗೆ ತಲುಪಿತ್ತು. ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಒಟ್ಟು ಆವಕ 2527.54 ಕ್ವಿಂಟಾಲ್ ಬಂದಿದೆ. ರುಚಿಗೆ ಹೆಸರಾಗಿರುವ ತಿಪಟೂರು, ಅರಸೀಕೆರೆ, ಹುಳಿಯಾರು ಮಾರುಕಟ್ಟೆಯ ಕೊಬ್ಬರಿಗೆ ಬೇಡಿಕೆ ಜಾಸ್ತಿಯಾಗಿದೆ.

www.vijayavani.net/a-kodagu-ponnampete-youn-man-darshan-love-case/

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net