ರಾಜ್ಯದಲ್ಲೂ ಬುಲ್ಡೋಜರ್ ನೀತಿ ಬರ್ಬೇಕು, ಸಿಎಂ 'ಬುಲ್ಡೋಜರ್ ಬೊಮ್ಮಾಯಿ' ಆಗ್ಬೇಕು: ಮಂಡ್ಯದಲ್ಲಿ ವಿಶೇಷ ಪೂಜೆ

mandya bjp Bulldozer
Published on

ಮಂಡ್ಯ: ರಾಜ್ಯದಲ್ಲೂ ಬುಲ್ಡೋಜರ್ ನೀತಿ ಜಾರಿಗೆ ತನ್ನಿ ಎಂದು ಸಿಎಂಗೆ ಮನವಿ ಮಾಡಿರುವ ಮಂಡ್ಯ ಬಿಜೆಪಿ ಕಾರ್ಯಕರ್ತರು ಗುರುವಾರ ಬುಲ್ಡೋಜರ್​ಗೆ ವಿಶೇಚ ಪೂಜೆ ಸಲ್ಲಿಸಿದರು.

ಹುಬ್ಬಳ್ಳಿ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಕಾರ್ಯಕರ್ತರು ಉತ್ತರ ಪ್ರದೇಶದ ರೀತಿ ರಾಜ್ಯದಲ್ಲೂ ಬುಲ್ಡೋಜರ್ ನೀತಿ ಜಾರಿಗೆ ತನ್ನಿ. ಬುಲ್ಡೋಜರ್ ಬಳಸಿ ಗಲಭೆಕೋರ ಮನೆ ಧ್ವಂಸಗೊಳಿಸಿ ಎಂದು ಮನವಿ ಮಾಡಿದರು.

ಮಂಡ್ಯದ ಶಕ್ತಿ ದೇವತೆ ಕಾಳಮ್ಮ ದೇವಾಲಯದಲ್ಲಿ ಬುಲ್ಡೋಜರ್‌‌ಗೆ ಪೂಜೆ ಸಲ್ಲಿಸಿ ಸರ್ಕಾರದ ಗಮನ ಸೆಳೆಯಲು ಯತ್ನಿಸಿದ ಬಿಜೆಪಿ ಕಾರ್ಯಕರ್ತರು, ಹಿಂದೂ-ಮುಸ್ಲಿಮರು ಸಹೋದರರಂತೆ ಬದುಕಿದ್ದೇವೆ. ಕೆಲ ಕಿಡಿಗೇಡಿಗಳು ಗಲಭೆ ಎಬ್ಬಸಿ ಕೋಮು ಸೌಹಾರ್ದತೆ ಹಾಳು ಮಾಡ್ತಿದ್ದಾರೆ. ಅಂತಹ ಗಲಭೆಕೋರರ ವಿರುದ್ಧ ಬುಲ್ಡೋಜರ್ ದಾಳಿ ಆಗಬೇಕು. ಅವರ ಮನೆ-ಆಸ್ತಿ ಧ್ವಂಸಗೊಳಿಸಬೇಕು. ಸಿಎಂ ಬಸವರಾಜ ಬೊಮ್ಮಾಯಿ ಅವರೇ ನೀವು 'ಬುಲ್ಡೋಜರ್ ಬೊಮ್ಮಾಯಿ' ಆಗಿ ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net