ಏ.26ಕ್ಕೆ ನನ್ನ ಮದ್ವೆ ಇದೆ, ದಯವಿಟ್ಟು ಎಲ್ಲಿಗಾದ್ರೂ ಓಡೋಗೋಣ... ಸಖತ್​ ವೈರಲ್​ ಆಗ್ತಿದೆ ಪ್ರಿಯತಮೆ ಸಂದೇಶ

10 rupee
Published on

ಬೆಂಗಳೂರು: ವಿಶಾಲ್​ ಏಪ್ರಿಲ್​ 26ರಂದು ನನ್ನ ಮದುವೆ. ದಯವಿಟ್ಟು ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು. ನಿನ್ನನ್ನು ಪ್ರೀತಿಸುತ್ತೇನೆ. ನಾನು ನಿನ್ನ ಕುಸುಮ್​(ವಿಶಾಲ್ 'ಮೇರಿ ಶಾದಿ ಏಪ್ರಿಲ್​​ 26ಕೋ ಹೈ. ಮುಝೇ ಭಾಗ್ ಕೇ ಲೇ ಜಾನಾ. ತುಮ್ಹಾರಿ ಕುಸುಮ್)... ಇದು ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ 10 ರೂಪಾಯಿ ನೋಟಿನ ಮೇಲೆ ಪ್ರೇಮ ಸಂದೇಶ ಬರೆದಿರುವ ಪರಿ. ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

ಕುಸುಮ್​ ಎಂಬಾಕೆ ತನ್ನ ಮನದಲ್ಲಿರುವ ಆಸೆಯನ್ನು 10 ರೂಪಾಯಿ ನೋಟಿನ ಮೂಲಕ ತನ್ನ ಪ್ರಿಯಕರ ವಿಶಾಲ್​ ರವಾನಿಸಿದ್ದಾಳೆ. ತನ್ನ ಮದುವೆ ನಿಶ್ಚಯವಾಗಿದೆ. ಆ ಮದುವೆ ಇಷ್ಟ ಇಲ್ಲ. ಎಲ್ಲಿಗಾದರೂ ನಾವಿಬ್ಬರೂ ಓಡಿಹೋಗೋಣ ಎಂದು ಪ್ರಿಯಕರನಿಗೆ ಸಂದೇಶ ರವಾನಿಸಿದ್ದಾಳೆ.

ಆ 10 ರೂಪಾಯಿ ನೋಟಿನ ಚಿತ್ರವನ್ನು ಟ್ವಿಟರ್​ನಲ್ಲಿ ವಿಪುಲ್ ಎಂಬುವವರು ಅಪ್​ಲೋಡ್​ ಮಾಡಿಕೊಂಡಿದ್ದು, ಈ ಸಂದೇಶ ವಿಶಾಲ್​ಗೆ ತಲುಪಲಿ. ದಯವಿಟ್ಟು ನಿಮಗೆ ತಿಳಿದಿರುವ ಎಲ್ಲಾ ವಿಶಾಲ್‌ ಹೆಸರಿನವರಿಗೆ ಟ್ಯಾಗ್​ ಮಾಡಿ. ಅದರಲ್ಲಿ ಯಾರಾದರೂ ಕುಸುಮ್​ರ ಪ್ರಿಯಕರ ಇದ್ದರೆ ಅವರಿಗೆ ಇದು ತಲುಪಲಿ ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ. ಈ ನೋಟಿನ ಮೇಲೆ ಬರೆದ ಪ್ರೇಮ ಸಂದೇಶ ಕಂಡ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net