ತಮ್ಮನಿಂದಲೇ ಅಣ್ಣನ ಹತ್ಯೆ, ಜಗಳ ಬಿಡಿಸಲು ಬಂದ ಅತ್ತಿಗೆಗೂ ಚಾಕು ಇರಿತ

murder case
Published on

ಮಂಡ್ಯ: ಅಣ್ಣ-ತಮ್ಮನ ಜಗಳ ವಿಕೋಪಕ್ಕೆ ತಿರುಗಿದ್ದು, ಜಗಳ ಬಿಡಿಸಲು ಬಂದ ಅತ್ತಿಗೆಗೂ ಚಾಕುವಿನಿಂದ ಇರಿದ ತಮ್ಮ, ಅಣ್ಣನನ್ನು ಕೊಂದಿದ್ದಾನೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಬಾಲಕೃಷ್ಣ ಮತ್ತು ಸುರೇಶ್​ ಇಬ್ಬರೂ ಸಹೋದರರು. ಮೈಸೂರಿನಲ್ಲಿ ವಾಸ ಮಾಡ್ತಿದ್ದ ಬಾಲಕೃಷ್ಣ ಲಾಕ್​ಡೌನ್ ಹಿನ್ನೆಲೆ ಊರಿಗೆ ಬಂದಿದ್ದ. ಇದನ್ನೂ ಓದಿರಿ ನಮ್ಮನ್ನು ಬದುಕಲು ಬಿಡಿ ಎಂದು ಕಣ್ಣೀರಿಟ್ಟರೂ ಪ್ರಿಯಕರನಿಗೆ ಚಪ್ಪಲಿ ಹಾರ ಹಾಕಿ ತಲೆ ಬೋಳಿಸಿದ ಯುವತಿ ಕುಟುಂಬಸ್ಥರು!

ಒಂದೇ ಮನೆಯ ಮಧ್ಯೆ ಗೋಡೆ ಹಾಕಿಕೊಂಡು ಅಣ್ಣ ಬಾಲಕೃಷ್ಣ ಮತ್ತು ತಮ್ಮ ಸುರೇಶ್​ ಪ್ರತ್ಯೇಕವಾಗಿ ವಾಸ ಮಾಡ್ತಿದ್ರು. ಇವರಿಬ್ಬರ ನಡುವೆ ಜಮೀನು ವಿಚಾರವಾಗಿ ನಿನ್ನೆ(ಸೋಮವಾರ) ಜಗಳ ನಡೆದಿದೆ. ದಾಯಾದಿ ಕಾಳಗ ವಿಕೋಪಕ್ಕೆ ತಿರುಗಿದ್ದು, ಜಗಳ ಬಿಡಿಸಲು ಹೋದ ಬಾಲಕೃಷ್ಣನ ಪತ್ನಿ ಸರಳಾಗೆ ಮೈದುನ ಸುರೇಶ್ ಚಾಕು ಹಾಕಿದ್ದಾನೆ. ಬಳಿಕ ಅಣ್ಣ ಬಾಲಕೃಷ್ಣ(54)ನನ್ನು ಕೊಲೆ ಮಾಡಿದ್ದಾನೆ. ಗಂಭೀರ ಗಾಯಗೊಂಡ ಸರಳಾರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net