

ಕಲಬುರಗಿ: ಕೂಲಿ ಕೆಲಸಕ್ಕಾಗಿ ಕಲಬುರಗಿಗೆ ಬಂದಿರುವ ರಾಜಸ್ಥಾನದ ದೌಲಪುರ ಜಿಲ್ಲೆ ಗುರ್ಜಾನ್ ಗ್ರಾಮದ ರಾಜಕುಮಾರ, ಹೃದಯಾಘಾತದಿಂದ ಭಾನುವಾರ ಮೃತಪಟ್ಟಿರುವ ತನ್ನ ತಂದೆ ಸತೀಶ್ ಕುಸಬಾ ಅವರ ಅಂತ್ಯಸಂಸ್ಕಾರಕ್ಕೂ ಹೋಗಲಾರದೆ ಕಣ್ಣಿರಿಡುತ್ತಿದ್ದಾನೆ. ಈತನೇ ಮನೆಗೆ ಹಿರಿಮಗ.
ತಂದೆ ಅಂತ್ಯಸಂಸ್ಕಾರದ ಜವಾಬ್ದಾರಿ ಈತನದ್ದೆ. ಆದರೆ, ಲಾಕ್ಡೌನ್ನಿಂದಾಗಿ ತನ್ನೂರಿಗೆ ಹೋಗಲು ಆಗುತ್ತಿಲ್ಲ. ಸ್ವಗ್ರಾಮಕ್ಕೆ ಹೋಗಲು ತೆರಳಲು ಅವಕಾಶ ಮಾಡಿಕೊಡಿ ಎಂದು ಕಲಬುರಗಿ ಜಿಲ್ಲಾಡಳಿತದ ಕದ ತಟ್ಟಿದ್ದಾನೆ. ಸೇವಾ ಸಿಂಧು ಆಪ್ನಲ್ಲಿ ಹೆಸರು ನೋಂದಾಯಿಸುವಂತೆ ಸೂಚಿಸಲಾಗಿದೆ. ಅನಕ್ಷರಸ್ಥನಾದ ಈತನಿಗೆ ಆಪ್ನಲ್ಲಿ ಹೆಸರು ನೋಂದಾಯಿಸುವ ಬಗ್ಗೆ ಮಾಹಿತಿ ಇಲ್ಲದೆ ಪರಿತಪಿಸುತ್ತಿದ್ದಾನೆ.