VIDEO| ಲಾಕ್​ಡೌನ್​ ಉಲ್ಲಂಘಿಸಿದವನಿಗೆ ಡ್ಯಾನ್ಸ್​ ಮಾಡಲು ಹೇಳಿ ಎಡವಟ್ಟು ಮಾಡ್ಕೊಂಡ ಪೊಲೀಸರು!

Man Dance
Published on

ಲಖನೌ: ವ್ಯಕ್ತಿಯೊಬ್ಬ ಬಾಲಿವುಡ್ ಡ್ಯಾನ್ಸರ್​ ಸಪ್ನ ಚೌಧರಿ ಅವರ ಪ್ರಖ್ಯಾತ "ತೇರಿ ಆಖ್ಯಾ ಕಾ ಯೋ ಕಾಜಲ್​" ಹಾಡಿಗೆ ಸೊಂಟ ಬಳುಕಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಗಿರಕಿ ಹೊಡೆಯುತ್ತಿದೆ.​

ಟ್ವಿಟರ್​ ಬಳಕೆದಾರ ಓಮರ್​ ರಶೀದ್​ ಎಂಬುವರು ವಿಡಿಯೋ ತುಣುಕನ್ನು ಶೇರ್​ ಮಾಡಿಕೊಂಡಿದ್ದು, ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಡ್ಯಾನ್ಸ್​ ಮಾಡುತ್ತಿರುವುದನ್ನು ಅನೇಕ ಪೊಲೀಸರು ನೋಡುತ್ತಿದ್ದಾರೆ. ಅಲ್ಲದೆ, ವ್ಯಕ್ತಿಯ ಹಿಂದೆ ನಿಂತಿರುವ ಪೇದೆಗಳು ಲೇವಡಿ ಮಾಡುತ್ತಾ, ವಿಡಿಯೋ ರೆಕಾರ್ಡಿಂಗ್​ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಅಷ್ಟಕ್ಕೂ ಆ ವ್ಯಕ್ತಿ ಮಾಡಿದ ತಪ್ಪಾದರೂ ಯಾವುದೆಂದರೆ ಕರೊನಾ ಲಾಕ್​ಡೌನ್​ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದು.

ಇದು ನಡೆದಿದ್ದು ಉತ್ತರ ಪ್ರದೇಶದ ಇಟಾವಾ ನಗರದ ಪೊಲೀಸ್​ ಠಾಣೆಯಲ್ಲಿ. ವ್ಯಕ್ತಿಯನ್ನು ಡ್ಯಾನ್ಸ್​ ಮಾಡಿಸಿ ಖುಷಿಪಟ್ಟ ಪೇದೆಗಳೂ ಸಹ ತಲೆದಂಡ ಅನುಭವಿಸಿದ್ದು, ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.

ಇತ್ತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಜತೆಗೆ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಪೊಲೀಸರ ಕ್ರಮವನ್ನು ಖಂಡಿಸಿದರೆ, ಇನ್ನು ಕೆಲವರು ವ್ಯಕ್ತಿಯ ನೃತ್ಯ ನೋಡಿ ಫಿದಾ ಆಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net