ಆಂಟಿಗೆ ನವವಿವಾಹಿತ ಯುವಕನ ಮೇಲೆ ಮೋಹ! ಮುಂದಾಗಿದ್ದು ಘನಘೋರ ದುರಂತ

crime
Published on

ಕೋಲಾರ: ಮದುವೆಗೂ ಮುನ್ನ ಆಂಟಿ ಸಹವಾಸ ಮಾಡಿದ್ದ ನವವಿವಾಹಿತ ಯುವಕನೊಬ್ಬ ಆಕೆಯಿಂದಲೇ ದುರಂತ ಅಂತ್ಯ ಕಂಡಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲೀಗ ಸೂತಕ ಆವರಿಸಿದೆ.

ಏನಿದು ಪ್ರಕರಣ: ಕೋಲಾರ ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಜಾಬೀರ್​ಗೆ ಕಳೆದ ತಿಂಗಳು ಮದುವೆ ಆಗಿತ್ತು. ಇದಾದ ಕೆಲವೇ ದಿನದಲ್ಲಿ ಈತ ನಾಪತ್ತೆಯಾಗಿದ್ದ. ಪಾಲಕರು ಮಗ ಕಾಣೆಯಾಗಿರುವ ಬಗ್ಗೆ ಪೊಲೀಸ್​ ಠಾಣೆಗೆ ದೂರು ದಾಖಲಿಸಿದ್ದರು. ಇದೀಗ ಈತನ ಶವ ಬೀದರ್​ನ ನಿಡುವಂಚಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದೆ. ಈತ ಕಾಣೆಯಾದ ದಿನವೇ ಕೊಲೆಯಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಷ್ಟಕ್ಕೂ ಈತ ಕೊಲೆಯಾಗಿದ್ದು ತನ್ನ ಆಂಟಿ(ಪ್ರೇಯಸಿ) ಕೈಯಿಂದಲೇ ಎಂಬ ಭಯಾನಕ ರಹಸ್ಯ ಬಯಲಾಗಿದೆ.

ಬೇರೆ ರಾಜ್ಯಗಳಿಂದ ಕಾರುಗಳನ್ನು ಖರೀದಿಸಿ ತಂದು ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದ ಜಾಬೀರ್​, ಜಿಮ್ ಬಾಡಿ ಮೇಂಟೈನ್ ಮಾಡಿಕೊಂಡು ಗಟ್ಟಿಮುಟ್ಟಾಗಿದ್ದ. ತನ್ನ ಮದುವೆಗೂ ಮುನ್ನ ತಂದೆಯ ದೂರದ ಸಂಬಂಧಿ ವಿವಾಹಿತ ಮಹಿಳೆ ಝಕಿಯಾ ಜತೆ ಸಲುಗೆ ಬೆಳೆಸಿಕೊಂಡಿದ್ದ. ಝಕಿಯಾಗೆ ಜಾಬೀರ್​ ಮೇಲೆ ಮೋಹ ಹೆಚ್ಚುತ್ತಲೇ ಇತ್ತು, ಅನೈತಿಕ ಸಂಭಂದವೂ ಇತ್ತು ಎನ್ನಲಾಗಿದೆ.

ಈ ನಡುವೆ ಜಾಬೀರ್​ಗೆ ಪಾಲಕರು ಚಿಕ್ಕಬಳ್ಳಾಪುರದಲ್ಲಿ ಬೇರೊಬ್ಬ ಯುವತಿ ಜತೆ ಮದುವೆ ಮಾಡಿದ್ದರು. ತನ್ನ ಪ್ರಿಯಕರ ಬೇರೊಬ್ಬಳನ್ನು ಮದುವೆ ಮಾಡಿಕೊಂಡದ್ದನ್ನು ಸಹಿಸದ ಝಕಿಯಾ, ಏನೇನೋ ನೆಪ ಹೇಳಿ ಜಾಬೀರ್​ನನ್ನು ಹೈದ್ರಾಬಾದ್‍ಗೆ ಕರೆಸಿಕೊಳ್ಳುವ ನಾಟಕವಾಡಿದ್ದಾಳೆ. ಬಳಿಕ ದಾರಿ ಸುಪಾರಿ ಕೊಟ್ಟು ಮಾರ್ಗಮಧ್ಯೆ ಭೀಕರವಾಗಿ ಕೊಲೆ ಮಾಡಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net