ಬಂಡಾಯದ ಬಾವುಟ ಹಾರಿಸಿ ಕೆಲವೇ ಗಂಟೆಯಲ್ಲಿ ತಣ್ಣಗಾದ ಆನಂದ್​ ಮಾಮನಿ!

anand mamani
Published on

ಬೆಂಗಳೂರು: ಬಸವರಾಜ ಬೊಮ್ಮಾಯಿ ಸಂಪುಟ ರಚನೆ ಬೆನ್ನಲ್ಲೇ ಅಸಮಾಧಾನ ಹೊರಹಾಕಿದ್ದ ಸವದತ್ತಿ ಕ್ಷೇತ್ರದ ಶಾಸಕ, ಉಪ ಸಭಾಧ್ಯಕ್ಷ ಆನಂದ್ ಮಾಮನಿ, ಇದೀಗ ಸೈಲೆಂಟ್​ ಆಗಿದ್ದಾರೆ.

ನನಗೆ ಸಚಿವ ಸ್ಥಾನದ ಬಗ್ಗೆ ಇನ್ನೂ ಕರೆ ಬಂದಿಲ್ಲ. ಸಚಿವ ಸ್ಥಾನ ಸಿಗದಿದ್ದರೆ ಕ್ಷೇತ್ರದ ಜನರ ಜತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುವೆ. ಬಿ.ಎಸ್.ಯಡಿಯೂರಪ್ಪ ಮತ್ತು ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸುವೆ ಎಂದು ಇಂದು ಬೆಳಗ್ಗೆ ಆನಂದ್ ಮಾಮನಿ ಹೇಳಿದ್ದರು. ಆ ಮೂಲಕ ಬಂಡಾಯದ ಮುನ್ಸೂಚನೆ ಕೊಟ್ಟಿದ್ದರು.

ಇದಾದ ಕೆಲವೆ ಗಂಟೆಗಳಲ್ಲಿ ತಣ್ಣಗಾದ ಆನಂದ್​, ನನಗೆ ಮುಂದೆ ಅವಕಾಶ ಸಿಗುವ ಸಾಧ್ಯತೆ ಇದೆ. ನಾನು ರಾಜೀನಾಮೆ ನಿರ್ಧಾರ ಮಾಡಿಲ್ಲ ಎಂದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net