

ಬೆಂಗಳೂರು: ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸಂಪುಟದಲ್ಲಿ ಬೆಂಗಳೂರು ಜಿಲ್ಲೆಯ 7 ಮಂದಿಗೆ ಅವಕಾಶ ಸಿಕ್ಕಿದೆ. 6 ಜಿಲ್ಲೆಗಳಲ್ಲಿ ಇಬ್ಬರಿಗೆ ಮಂತ್ರಿಗಿರಿ ಕೊಡಲಾಗಿದೆ. ಆದರೆ, ರಾಜ್ಯದ 13 ಜಿಲ್ಲೆಗಳಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ. ತಮ್ಮ ಜಿಲ್ಲೆಯವರಿಗೆ ಮಂತ್ರಿ ಸ್ಥಾನ ಕೊಟಿಲ್ಲವೆಂದು ಸ್ಥಳೀಯವಾಗಿ ಅಸಮಾಧಾನ ಭುಗಿಲೆದ್ದಿದ್ದೆ.
ದಾವಣಗೆರೆ ಜಿಲ್ಲೆಯ 7 ಶಾಸಕರ ಪೈಕಿ ಐವರು ಬಿಜೆಪಿ ಶಾಸಕರಿದ್ದರೂ ಬೊಮ್ಮಾಯಿ ಸಂಪುಟದಲ್ಲಿ ಒಬ್ಬರಿಗೂ ಅವಕಾಶ ಸಿಕ್ಕಿಲ್ಲ. ಬಿಎಸ್‌ವೈ ಅಧಿಕಾರಾವಧಿಯಲ್ಲೂ ದಾವಣಗೆರೆ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತವಾಗಿತ್ತು. ಇನ್ನು ಹಳೇ ಮೈಸೂರು ಭಾಗಕ್ಕೂ ನಿರೀಕ್ಷೆಯಂತೆ ಸಚಿವ ಸ್ಥಾನ ಲಭಿಸಿಲ್ಲ.