ದಶಕದ ಬಳಿಕ ಮೂಡಲ್ ಕುಣಿಗಲ್ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಈ ಐಭೋಗ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬರುತ್ತಿದೆ. ಕುಣಿಗಲ್ ಎಂದಾಕ್ಷಣ 'ಮೂಡಲ್ ಕುಣಿಗಲ್ ಕೆರೆ ನೋಡೋರಿಗೊಂದೈಭೋಗ.. ಮೂಡಿ ಬರ್ತಾನೆ ಚಂದಿರಾಮ.. ತಾನಂದನೋ ಮೂಡಿ ಬರ್ತಾನೆ ಚಂದಿರಾಮ..' ಹಾಡು ನೆನಪಾಗುತ್ತೆ. ಈ ಜನಪದ ಗೀತೆಯನ್ನ 'ನನ್ನ ಪ್ರೀತಿಯ ಹುಡುಗಿ' ಸಿನಿಮಾದಲ್ಲೂ ಬಳಸಿಕೊಳ್ಳಲಾಗಿದೆ. ಕುಣಿಗಲ್ ದೊಡ್ಡಕೆರೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಜೀವನಾಡಿಯಾಗಿದ್ದು, ಕೆರೆ ಕೋಡಿ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಜನತೆ ಖುಷಿಯಿಂದಲೇ ಬಂದು ನೀರಾಟ ಆಡುತ್ತಾ ಸಂಭ್ರಮಿಸುತ್ತಿದ್ದಾರೆ. ಆ ರಮಣೀಯ ದೃಶ್ಯ ಛಾಯಾಗ್ರಾಹಕ ಸುಪ್ರಿತ್ ಕುಣಿಗಲ್ ಅವರ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ...