

ಬೆಂಗಳೂರು: ಜೇಬು, ಬ್ಯಾಗ್ ಕಳ್ಳರಿಗೆ ತಮ್ಮ ಕೈಚಳಕ ತೋರಿಸಲು ಜನಜಂಗುಳಿಯೇ ಬಂಡವಾಳ. ಇದನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ಚಿನ್ನದ ಗಟ್ಟಿ ಖರೀದಿಸಲು ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬಂದಿದ್ದ ಜುವೆಲ್ಲರಿ ಅಂಗಡಿ ಮಾಲೀಕರೊಬ್ಬರ ಬ್ಯಾಗ್ ಅನ್ನ ಬ್ಲೇಡ್ನಿಂದ ಕೊಯ್ದು, 3.57 ಲಕ್ಷ ರೂ. ನಗದು ಮತ್ತು 28 ಗ್ರಾಂ ಚಿನ್ನದ ಅವಲಕ್ಕಿ ಸರ ಲಪಟಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ನಿವಾಸಿ ಮೆಹರಾಮ್ (50) ಚಿನ್ನಾಭರಣ ಮತ್ತು ಹಣ ಕಳೆದುಕೊಂಡವರು. ಮೆಹರಾಮ್ ಚಿಕ್ಕಬಳ್ಳಾಪುರದಲ್ಲಿ ಮಹದೇವ್ ಜುವೆಲ್ಲರ್ಸ್ ಹೆಸರಿನ ಚಿನ್ನದ ಅಂಗಡಿ ಹೊಂದಿದ್ದಾರೆ. ಜ.10ರಂದು ಮಧ್ಯಾಹ್ನ 3.30ಕ್ಕೆ ಚಿನ್ನದ ಗಟ್ಟಿ ಖರೀದಿಸುವ ಸಲುವಾಗಿ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಬಂದಿದ್ದರು. ಎಸ್ಪಿ ರಸ್ತೆಯ ಎಚ್ಕೆಕೆ ಲೇನ್ ಮೂಲಕ ಹೋಗುತ್ತಿದ್ದಾಗ ಜನಜಂಗುಳಿ ಹೆಚ್ಚಿತ್ತು.
ಆಗ ಅವರ ಬ್ಯಾಗ್ ಕೊಯ್ದು ಕಳ್ಳರು ಹಣ-ಆಭರಣ ಕದ್ದು ಪರಾರಿಯಾಗಿದ್ದಾರೆ. ಸ್ವಲ್ಪ ಸಮಯದ ಬಳಿಕ ಬ್ಯಾಗ್ನ್ನು ಪರಿಶೀಲಿಸಿದಾಗ ಬ್ಯಾಗ್ನ ಒಂದು ಬದಿಯನ್ನು ಬ್ಲೇಡ್ನಿಂದ ಕುಯ್ದು 3.57 ಲಕ್ಷ ರೂ. ಹಾಗೂ 28 ಗ್ರಾಂ ಚಿನ್ನದ ಅವಲಕ್ಕಿ ಸರವನ್ನು ಕಳ್ಳರು ಕದ್ದಿರುವುದು ಬೆಳಕಿಗೆ ಬಂದಿತ್ತು. ಮೆಹರಾಮ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ಆರೋಪಿಗಳಿಗೆ ಶೋಧ ನಡೆಸುತ್ತಿದ್ದಾರೆ.
kr market