ಗಂಡನ ಮೊಬೈಲ್​ನಲ್ಲಿತ್ತು ಪತ್ನಿ ಜತೆಗೆ ಹಲವು ಸ್ತ್ರೀಯರ ಅಶ್ಲೀಲ ದೃಶ್ಯ! ಮದ್ವೆ ಆಗಿ ವರ್ಷವೂ ತುಂಬಿಲ್ಲ.. ಈತ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ...

Groom-cheating
Published on

ಬೆಂಗಳೂರು: ಇಲ್ಲೊಬ್ಬ ತನ್ನ ಪತ್ನಿಯ ಜತೆ ಏಕಾಂತದಲ್ಲಿರುವ ಸಮಯದಲ್ಲಿ ಆಕೆಯ ಗಮನಕ್ಕೆ ಬಾರದಂತೆ ಇಬ್ಬರ ನಡುವಿನ ಅಶ್ಲೀಲ ವಿಡಿಯೋ, ಫೋಟೊಗಳನ್ನು ಮೊಬೈಲ್​ನಲ್ಲಿ ಸೆರೆಹಿಡಿಯುತ್ತಿದ್ದ. ಈ ವಿಷ್ಯ ಆಕೆಗೆ ಗೊತ್ತಾಗುತ್ತಿದ್ದಂತೆ ಡಿಲೀಟ್​ ಮಾಡುವಂತೆ ರದ್ದಾಂತ ಮಾಡಿದ್ದಾಳೆ. ಗಂಡನ ಮೊಬೈಲ್​ ಕಸಿದುಕೊಂಡು ಪರಿಶೀಲಿಸಿದಾಗ, ಮತ್ತಷ್ಟು ಆಘಾತಕಾರಿ ರಹಸ್ಯ ಬಯಲಾಗಿದೆ...

2021 ಫೆ.21ರಂದು ಚಿಕ್ಕಮಗಳೂರು ಮೂಲದ 27 ವರ್ಷದ ಯುವಕನ ಜತೆ ಬೆಂಗಳೂರಿನ ಮಲ್ಲೇಶ್ವರದ 24 ವರ್ಷದ ಯುವತಿಯ ಮದುವೆ ಆಗಿತ್ತು. ಇಬ್ಬರೂ ಬೆಂಗಳೂರಲ್ಲೇ ವಾಸವಿದ್ದರು. ಮದ್ವೆಯಾದ ಕೆಲ ದಿನಗಳಲ್ಲೇ ಪತಿ ಕುಡಿದು ಬಂದು ಕಿರುಕುಳ ಕೊಡಲಾರಂಭಿಸಿದ್ದ. ಹಣಕ್ಕಾಗಿ ಪೀಡಿಸುತ್ತಿದ್ದ. ಅಷ್ಟೇ ಅಲ್ಲ, ಮೊಬೈಲ್​ ತೋರಿ ಹಣ ಕೊಡಲೇ ಬೇಕು ಎಂದು ಬೆದರಿಸುತ್ತಿದ್ದ.

ಈತನಿಗೆ ಕುಡಿಯುವ ಜತೆಗೆ ಡ್ರಗ್ಸ್​ ಸೇವನೆ ಚಟ ಇತ್ತು. ಈ ಬಗ್ಗೆ ಪ್ರಶ್ನಿಸಿದಾಗ, ಪತ್ನಿಗೂ ಡ್ರಗ್ಸ್​ ಸೇವಿಸುವಂತೆ ಒತ್ತಾಯ ಮಾಡುತ್ತಿದ್ದ. ಈ ನಡುವೆ ಡ್ರಗ್ಸ್​ ಖರೀದಿಸಲು ಹಣದ ಕೊರತೆ ಎದುರಾದಾಗ, ವರದಕ್ಷಿಣೆ ತರುವಂತೆ ಪತ್ನಿಗೆ ಹಲ್ಲೆ ನಡೆಸಿ ಬೆದರಿಸಿದ್ದ. ಏಕಾಂತದಲ್ಲಿರುವ ಸಮಯದಲ್ಲಿ ಪತ್ನಿಯ ಗಮನಕ್ಕೆ ಬಾರದಂತೆ ಇಬ್ಬರ ನಡುವಿನ ಅಶ್ಲೀಲ ವಿಡಿಯೋ, ಫೋಟೊಗಳನ್ನು ಆರೋಪಿ ಮೊಬೈಲ್​ನಲ್ಲಿ ಸೆರೆಹಿಡಿಯುತ್ತಿದ್ದ. ಇದು ಪತ್ನಿ ಗಮನಕ್ಕೆ ಬಂದು ಅದನ್ನು ಡಿಲೀಟ್​ ಮಾಡುವಂತೆ ಸೂಚಿಸಿ, ಪತಿಯ ಮೊಬೈಲ್​ ಕಸಿದುಕೊಂಡು ಪರಿಶೀಲಿಸಿದಾಗ, ಅದರಲ್ಲಿ ದೂರುದಾರ ಮಹಿಳೆಯ ಹಲವು ಅಶ್ಲೀಲ ವಿಡಿಯೋಗಳು ಇರುವುದು ಕಂಡು ಬಂದಿತ್ತು. ಅಷ್ಟೇ ಅಲ್ಲ, ಇತರ ಮಹಿಳೆಯ ಜತೆಗೆ ಅಕ್ರಮ ಸಂಬಂಧ ಹೊಂದಿರುವ ರಹಸ್ಯವೂ ಬಯಲಾಗಿದೆ. ಈ ಬಗ್ಗೆ ಪತಿಯನ್ನು ಪ್ರಶ್ನಿಸಿದಾಗ, ಆತ ಮತ್ತೆ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ಕೊಡಲು ಆರಂಭಿಸಿದ್ದ. ನೊಂದ ಪತ್ನಿ ಠಾಣೆ ಮೆಟ್ಟಿಲೇರಿದಾಗ, ಪೊಲೀಸರು ಮಧ್ಯ ಪ್ರವೇಶಿಸಿ ಇಬ್ಬರ ನಡುವೆ ರಾಜಿ ಸಂದಾನ ಮಾಡಿದ್ದರು.

ಇದಾದ ಕೆಲ ದಿನಗಳ ಬಳಿಕ ವರದಕ್ಷಿಣೆ ತರದಿದ್ದರೆ ನಿನ್ನ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದಾಗಿ ಪತಿ ಬೆದರಿಸಿದ್ದಾನೆ. ಜತೆಗೆ ಮನೆಯಿಂದ ಹೊರ ಹಾಕಿದ್ದಾನೆ. ನೊಂದ ಪತ್ನಿ ಗಂಡನ ವಿರುದ್ಧ ವೈಯಾಲಿಕಾವಾಲ್​ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net