More

    ಸೋಲದೇವನಹಳ್ಳಿ ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ಕೊಟ್ಟದ್ದೇ ಮಾಲೀಕನ ಪತ್ನಿ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

    ಬೆಂಗಳೂರು: ಸೋಲದೇವನಹಳ್ಳಿಯ ಯೂ ಟರ್ನ್​​ ಡಾಬಾಗೆ ಬೆಂಕಿ ಬಿದ್ದು ಓರ್ವ ನೌಕರ ಮೃತಪಟ್ಟ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಡಾಬಾ ಮಾಲೀಕನ ಪತ್ನಿಯೇ ಡಾಬಾಕ್ಕೆ ಬೆಂಕಿ ಹಚ್ಚಲು ಸುಪಾರಿ ಕೊಟ್ಟಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಡಾಬಾ ಮಾಲೀಕ ಅರ್ಪಿತ್​​ಗೆ ಕೆಲ ವರ್ಷಗಳ ಹಿಂದೆ ಮ್ಯಾಟ್ರಿಮೊನಿಯಲ್​ನಲ್ಲಿ ಪ್ರತಿಷ್ಠಿತ ಕಂಪನಿಯಲ್ಲಿ ಸ್ಟಾಫ್ಟ್​​ವೇರ್​ ಇಂಜಿನಿಯರ್​ ಆಗಿರುವ ಶೀತಲ್​ನ ಪರಿಚಯವಾಗಿತ್ತು. ನಂತರ ಅರ್ಪಿತ್​​, ಶೀತಲ್​ಳನ್ನು ವಿವಾಹವಾಗಿದ್ದ. ಮದ್ವೆಯಾದ ನಾಲ್ಕು ತಿಂಗಳಲ್ಲೇ ಇಬ್ಬರ ನಡುವೆ ವೈಮನಸ್ಸು ಶುರುವಾಗಿತ್ತು. ಪ್ರತಿನಿತ್ಯ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಶೀತಲ್​ ಗಂಡನನ್ನು ಬಿಟ್ಟು ತವರು ಮನೆ ಸೇರಿದ್ದಳು. ಈ ನಡುವೆ ಆಕೆಯ ತಂದೆಗೆ ಅನಾರೋಗ್ಯವಾಗಿತ್ತು. ಆದರೂ ಶೀತಲ್​ಳನ್ನು ನೋಡಲು ಗಂಡ ಬಂದಿರಲಿಲ್ಲ. ಇದರಿಂದ ಆಕ್ರೋಶಗೊಂಡ ಶೀತಲ್​, ಗಂಡನಿಗೆ ಪಾಠ ಕಲಿಸಬೇಕೆಂದು ತನ್ನ ಅಣ್ಣ ನಿಶ್ಚಲ್​ ಜತೆ ಸೇರಿ ಅರ್ಪಿತ್​ನನ್ನು ಬೆದರಿಸಲು ಸಂಚು ರೂಪಿಸಿದ್ದಳು. ಅದೇ ಸಂದರ್ಭದಲ್ಲಿ ಶೀತಲ್​ನ ಬಾಲ್ಯದ ಗೆಳೆಯ ರೌಡಿ ಮನುಕುಮಾರ್​ ಸಿಕ್ಕಿದ್ದ. ಮನುಕುಮಾರ್​ ಬಳಿ ಶೀತಲ್​ ಈ ವಿಚಾರ ಪ್ರಸ್ತಾಪಿಸಿದ್ದಳು. ಅರ್ಪಿತ್​​ ಆರ್ಥಿಕ ಸಂಕಷ್ಟಕ್ಕೆ ಒಳಗಾದ್ರೆ ತನ್ನ ಬಳಿ ಬರ್ತಾನೆ ಎಂದು ಭಾವಿಸಿದ ಶೀತಲ್​, ಡಾಬಾಗೆ ಬೆಂಕಿ ಹಚ್ಚುವ ಪ್ಲ್ಯಾನ್​ ಮಾಡಿದ್ದಳು.

    ಅದರಂತೆ ಡಾಬಾಕ್ಕೆ ಬೆಂಕಿ ಹಚ್ಚಲು ಶೀತಲ್​ ಬಳಿ ಮನುಕುಮಾರ್​ 20 ಸಾವಿರ ರೂ. ಸುಪಾರಿ ಕೇಳಿದ್ದ. ಅದರಂತೆ ಮೊದಲ ಬಾರಿ 15 ಸಾವಿರ ರೂ. ಹಾಗೂ ನಂತರ 5 ಸಾವಿರ ರೂ. ಕೊಟ್ಟಿದ್ದಳು. ಸುಪಾರಿ ಪಡೆದ ಮನು ತನ್ನ ಸಹಚರರಾದ ಹೇಮಂತ್​, ಮಂಜುನಾಥ್​ಗೆ 5 ಸಾವಿರ ರೂ. ಕೊಟ್ಟು ಡಾಬಾಗೆ ಬೆಂಕಿ ಹಚ್ಚಲು ಸೂಚಿಸಿದ್ದ. 2021ರ ಡಿ.23ರ ರಾತ್ರಿ 12 ಗಂಟೆಗೆ ಆರೋಪಿಗಳು ಡಾಬಾಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಬೆಂಕಿ ಉರಿಯುತ್ತಿರುವುದನ್ನು ಕಂಡು ಡಾಬಾ ಸಿಬ್ಬಂದಿ ಮನೋಜ್​ ಬಾಗಿಲು ತೆರೆದಾಗ ಆತನ ಮೈಗೂ ಬೆಂಕಿ ತಗುಲಿತ್ತು. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಡಿ.28ರಂದು ಡಾಬಾ ಸಿಬ್ಬಂದಿ ಮನೋಜ್​ ಮೃತಪಟ್ಟಿದ್ದ.

    ಸುಳಿವು ಕೊಟ್ಟ ಸಿಸಿ ಕ್ಯಾಮರಾ: ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಡಾಬಾಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಗರದಲ್ಲಿನ 45ಕ್ಕೂ ಹೆಚ್ಚು ಪೆಟ್ರೋಲ್​ ಬಂಕ್​ಗಳ ಸಿಸಿ ಕ್ಯಾಮರಾ ಪರಿಶೀಲಿಸಿದ್ದರು. ಈ ಪೈಕಿ ಡಿ.23ರಂದು ಒಂದು ಬಂಕ್​ನಿಂದ ರಾತ್ರಿ ಹೇಮಂತ್​ ಮತ್ತು ಮಂಜುನಾಥ್​ ಕ್ಯಾನ್​ನಲ್ಲಿ ಪೆಟ್ರೋಲ್​ ತುಂಬಿಕೊಂಡು ಬೈಕ್​ನಲ್ಲಿ ಹೋಗುತ್ತಿರುವುದು ಸಿಸಿ ಕ್ಯಾಮರಾದಲ್ಲಿ ಕಂಡು ಬಂದಿತ್ತು. ಇಬ್ಬರನ್ನೂ ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ರೌಡಿ ಮನುಕುಮಾರ್​ ಸೂಚನೆ ಮೇರೆಗೆ ಡಾಬಾಗೆ ಬೆಂಕಿ ಹಚ್ಚಿರುವುದಾಗಿ ಹೇಳಿದ್ದರು. ಆರೋಪಿಗಳಾದ ರೌಡಿ ಮನುಕುಮಾರ್​ (42), ಸಹಚರರಾದ ಹೇಮಂತ್​(34) , ಮಂಜುನಾಥ್​ (32) ನನ್ನು ಪೊಲೀಸರು ಬಂಧಿಸಿದ್ದಾರೆ. ಸುಪಾರಿ ಕೊಟ್ಟಿದ್ದ ಶೀತಲ್​ ಹಾಗೂ ಆಕೆಯ ಅಣ್ಣ ನಿಶ್ಚಲ್​ ತಲೆಮರೆಸಿಕೊಂಡಿದ್ದಾರೆ.

    ಪತಿ ಮತ್ತೆ ಸಿಗಬಹುದೆಂದು ಕೃತ್ಯ: ಡಾಬಾಗೆ ಬೆಂಕಿ ಹಚ್ಚಿದರೆ ಅರ್ಪಿತ್​​ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಮತ್ತೆ ನನ್ನ ಬಳಿ ಬರಬಹುದು ಎಂಬ ಉದ್ದೇಶದಿಂದ ಶೀತಲ್​ ಸುಪಾರಿ ಕೊಟ್ಟಿದ್ದಾಳೆ. ಡಾಬಾ ಸಿಬ್ಬಂದಿ ಮನೋಜ್​ನನ್ನು ಕೊಲೆ ಮಾಡುವ ಉದ್ದೇಶ ಇರಲಿಲ್ಲ. ಆತನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ ಎಂದು ವಿಚಾರಣೆ ವೇಳೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಮನುಕುಮಾರ್​ ಮತ್ತು ಹೇಮಂತ್​ ವಿರುದ್ಧ ನಗರದ ವಿವಿಧ ಪೊಲೀಸ್​ ಠಾಣೆಗಳಲ್ಲಿ ಸರಗಳ್ಳತನ, ಸುಲಿಗೆ, ದರೋಡೆ ಸಂಚು, ಅಪಹರಣ, ಗಲಾಟೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಲ್ಲಿ ಕಂಡು ಬಂದಿದೆ.

    ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟ ತುಮಕೂರು ಎಸ್​​ಪಿ! ಠಾಣೆ ಮುಂದೆ ಕಾರು ಬರ್ತಿದ್ದಂತೆ ಪಿಎಸ್​ಐ ಗಢಗಢ

    ಅಪಘಾತದಲ್ಲಿ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವು: ಪ್ರತ್ಯಕ್ಷದರ್ಶಿ ಬಿಚ್ಚಿಟ್ಟ ಘೋರ ಸತ್ಯ ಇಲ್ಲಿದೆ

    ಪ್ರೇಯಸಿಯನ್ನ ಕೊಂದು ಶವಕ್ಕೆ ಸ್ನಾನ ಮಾಡಿಸಿ ಇಡೀ ರಾತ್ರಿ ಅದರೊಟ್ಟಿಗೆ ಇದ್ದ! ಬೆಳಗಾಗುತ್ತಿದ್ದಂತೆ ನಾಟಕ ಶುರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts