

ಮಂಗಳೂರು: 22 ವರ್ಷದ ಯುವತಿಯೊಬ್ಬಳು ತನ್ನ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಸಜೀವ ದಹನವಾಗಿದ್ದಾಳೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ದುರ್ಘಟನೆ ಸಂಭವಿಸಿದೆ. ಗ್ರಾಮದ ನಿವಾಸಿ ವಿ.ಜೆ.ಜೋಸೆಫ್ರ ಪುತ್ರಿ ನವ್ಯಾ ಜೋಸೆಫ್ ಆತ್ಮಹತ್ಯೆ ಮಾಡಿಕೊಂಡವಳು. ಇದನ್ನೂ ಓದಿರಿ ಹೊಟ್ಟೆಗೆ ಕಲ್ಲು ಕಟ್ಟಿಕೊಂಡು ಬಾವಿಗೆ ಹಾರಿ ಅಣ್ಣ-ತಮ್ಮ ಆತ್ಮಹತ್ಯೆ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ
ಮೃತ ನವ್ಯಾ ಬಿಬಿಎ ಪದವೀಧರೆ. ಓದು ಮುಗಿದ ಬಳಿಕ ಮನೆಯಲ್ಲೇ ಇದ್ದ ನವ್ಯಾ, ಭಾನುವಾರ ರಾತ್ರಿ 10:30ರ ಸುಮಾರಿಗೆ ತನ್ನ ಕೊಠಡಿಗೆ ತೆರಳಿದ್ದಳು. ಬೆಳಗ್ಗೆ ಕೋಣೆಯಿಂದ ನವ್ಯಾ ಹೊರ ಬಂದಿರಲಿಲ್ಲ. ಅನುಮಾನಗೊಂಡ ಪಾಲಕರು ಬಾಗಿಲು ಮುರಿದು ನೋಡಿದಾಗ ನವ್ಯಾ ಸುಟ್ಟುಕರಕಲಾಗಿದ್ದಳು.
ಸ್ಥಳಕ್ಕೆ ಭೇಟಿ ನೀಡಿದ ಉಪ್ಪಿನಂಗಡಿ ಪೊಲೀಸರು ಪಕ್ರಣ ದಾಖಲಿಸಿಕೊಂಡಿದ್ದಾರೆ. ಆ ರಾತ್ರಿ ಮನೆಯಲ್ಲಿ ಏನಾಯ್ತು? ಆಕೆ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಳು ಎಂಬುದು ನಿಗೂಢವಾಗಿದೆ. ತನಿಖೆ ಬಳಿಕ ರಹಸ್ಯ ಬಯಲಾಗಲಿದೆ.