ಸಂಸ್ಕಾರದ ಫಲ ಬನ್ನಂಜೆ ಸಾಧನೆಗೆ ಮುಕುಟಮಣಿ : ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ : ಸುಬ್ರಹ್ಮಣ್ಯದಲ್ಲಿ 90ರ ನಮನ ಕಾರ್ಯಕ್ರಮ

New Project (16)
Published on

ವಿಜಯವಾಣಿ ಸುದ್ದಿಜಾಲ ಸುಬ್ರಹ್ಮಣ್ಯ

ಬನ್ನಂಜೆ ಗೋವಿಂದಾಚಾರ್ಯರು ವಿಶ್ವಾದ್ಯಂತ ಹೆಸರುವಾಸಿಯಾದ ವಿದ್ವಾಂಸರು. ಸಾಧನೆಗೆ ಬನ್ನಂಜೆಯವರು ಸ್ಫೂರ್ತಿಯ ಚಿಲುಮೆಯಾಗುತ್ತಾರೆ. ಸಂಸ್ಕಾರದ ಫಲ ಬನ್ನಂಜೆಯವರ ಸಾಧನೆಗೆ ಮುಕುಟಮಣಿ ಎಂದು ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಬೆಂಗಳೂರು ಮತ್ತು ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಆಶ್ರಯದಲ್ಲಿ ಮಠದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಬನ್ನಂಜೆಯವರಿಗೆ 90ರ ನಮನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಗೌರವಾರ್ಪಣೆ: ವಿದ್ವಾಂಸ ಕೃಷ್ಣರಾಜ ಆಚಾರ್ಯ ಕುದ್ಪಾಡಿ ಮತ್ತು ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ ಕಾರ್ಯಾಧ್ಯಕ್ಷ ಜಿ.ವೆಂಕಟೇಶ್ ಮಲ್ಲೇಶ್ವರಂ ಅವರು ಬನ್ನಂಜೆಯವರ ಬಗ್ಗೆ ಉಪನ್ಯಾಸ ನೀಡಿದರು. ಮಠದ ದಿವಾನ ಸುದರ್ಶನ ಜೋಯೀಸ, ಕಲಾವಿದ ಕೆ.ಯಜ್ಞೇಶ್ ಆಚಾರ್ ಉಪಸ್ಥಿತರಿದ್ದರು.

ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಸಹಕಾರ ನೀಡಿದವರನ್ನು ಗೌರವಿಸಲಾಯಿತು. ಮುಖ್ಯಗುರು ಸತ್ಯಶಂಕರ ಭಟ್ ನಿರೂಪಿಸಿದರು. ಸುಮ ಶಾಸ್ತ್ರಿ, ಕವಿತಾ ಉಡುಪ, ಕಿರಣ್ ಸಹಕರಿಸಿದರು. ಬಳಿಕ ಕವಿತಾ ಉಡುಪ ಮತ್ತು ಸುಮಾ ಶಾಸ್ತ್ರಿ ಅವರು ಬನ್ನಂಜೆಯವರು ಬರೆದ ಹಾಡನ್ನು ಹಾಡಿದರು. ನಟ ಸುಚೇಂದ್ರ ಪ್ರಸಾದ್ ನಿರ್ದೆಶನದಲ್ಲಿ ನನ್ನ ಪಿತಾಮಹ ನಾಟಕ ಪ್ರದರ್ಶಿತವಾಯಿತು.

ಬನ್ನಂಜೆಯವರ ಜೀವನ ಮತ್ತು ನಡೆ ಸರ್ವರಿಗೂ ಮಾದರಿ. ಸರಳ ಸಜ್ಜನಿಕೆಯೊಂದಿಗೆ ಅನುಷ್ಠಾನವನ್ನು ಅಳವಡಿಸಿಕೊಂಡು ಪಾಂಡಿತ್ಯ ಬೆಳೆಸಿಕೊಂಡಿರುವುದು ಬನ್ನಂಜೆಯವರ ಅಸಾಧಾರಣವಾದ ಪ್ರತಿಭೆ. ವಿದೇಶಿಯರು ಕೂಡ ಇವರ ಪಾಂಡಿತ್ಯವನ್ನು ಮೆಚ್ಚಿ ಗೌರವಿಸಿದ್ದಾರೆ ಎನ್ನುವುದು ನಮ್ಮ ಹೆಮ್ಮೆ. ಬನ್ನಂಜೆಯವರ ಪುಸ್ತಕಗಳು ಅವರನ್ನು ಅಜರಾಮರಗೊಳಿಸಿದೆ. ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯ ಮಠಾಧೀಶ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net