ಯೇನೆಕಲ್ಲಿನಲ್ಲಿ ಗುರುಗಮನ ಗುರುನಮನ

New Project (13)
Published on

ಸುಬ್ರಹ್ಮಣ್ಯ: ರೈತ ಯುವಕ ಮಂಡಲ ಚಾರಿಟೆಬಲ್ ಟ್ರಸ್ಟ್ ಮತ್ತು ಯೇನೆಕಲ್ಲು ಮತ್ತು ರೈತ ಯುವಕ ಮಂಡಲ ಯೇನೆಕಲ್ಲು ವತಿಯಿಂದ ಯೇನೆಕಲ್ಲಿನಲ್ಲಿ ಅಂತಾರಾಷ್ಟ್ರೀಯ ಶಿಕ್ಷಕ ದಿನಾಚರಣೆ ಸೋಮವಾರ ನೆರವೇರಿತು.

ರೈತ ಯುವಕ ಮಂಡಲದ ಸಭಾಭವನದಲ್ಲಿ ಗುರುಗಮನ ಗುರುನಮನ ಕಾರ್ಯಕ್ರಮದಲ್ಲಿ ಗುರುಗಳಿಗೆ ಗೌರವಾರ್ಪಣೆ ನಡೆಯಿತು.

ಪತ್ರಕರ್ತ ದುರ್ಗಾಕುಮಾರ್ ನಾಯರ್ ಕೆರೆ ಮಾತನಾಡಿ, ಪ್ರತಿ ಮನೆಯೂ ಒಂದು ಶಾಲೆಯಂತಿರುವ ಗ್ರಾಮವಿದು. ಯೇನೆಕಲ್ಲು ಗ್ರಾಮದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಶಿಕ್ಷಕರು ಗುರು ಪರಂಪರೆ ಮೂಲಕ ಜಗತ್ತಿಗೆ ಮಾದರಿಯಾಗಿದ್ದಾರೆ. ಆದರ್ಶವಾಗಿ ಮತ್ತು ವೃತ್ತಿಯಾಗಿ ದೊಡ್ಡ ಕೊಡುಗೆ ಇಲ್ಲಿನ ಶಿಕ್ಷಕರಿಂದ ದೊರಕಿದೆ ಎಂದರು.

ಕೆ.ಎಸ್.ಎಸ್ ಕಾಲೇಜು ನಿವೃತ್ತ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಪೈ ಕಾರ್ಯಕ್ರಮ ಉದ್ಘಾಟಿಸಿದರು. ರೈತ ಯುವಕ ಮಂಡಲ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ಶಿಕ್ಷಕರನ್ನು ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ತುಕಾರಾಮ್ ಯೇನೆಕಲ್ಲು, ಡಾ.ಶಿವಕುಮಾರ್ ಹೊಸೊಳಿಕೆ, ಜಯಲಕ್ಷ್ಮೀ ಅಡ್ಪಂಗಾಯ ಮಾತನಾಡಿದರು. ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಸಂಸ್ಥೆ ಸಂಚಾಲಕ ಗಣೇಶ್ ಪ್ರಸಾದ್ ಎನ್. ಅನಿಸಿಕೆ ವ್ಯಕ್ತಪಡಿಸಿದರು.

ಟ್ರಸ್ಟಿನ ಉಪಾಧ್ಯಕ್ಷ ಶಿವರಾಮ ಯೇನೆಕಲ್ಲು ಸ್ವಾಗತಿಸಿದರು. ಕೋಶಾಧಿಕಾರಿ ನಾಗರಾಜ್ ಪರಮಲೆ ವಂದಿಸಿದರು. ನಿರ್ದೇಶಕ ವಿಜಯ್ ಕುಮಾರ್ ಅಮೈ ನಿರೂಪಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿನಿಯ ಶಿಕ್ಷಣದ ಖರ್ಚನ್ನು ಟ್ರಸ್ಟ್ ವತಿಯಿಂದ ಭರಿಸುವುದಾಗಿ ಘೋಷಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net