ಹಿಂದುಗಳ ಸಂಘಟಿತ ಹೋರಾಟ ಅನಿವಾರ್ಯ : ಸ್ವಾಮಿ ವಿವಿಕ್ತಾನಂದ ಸರಸ್ವತೀ ಆಶೀರ್ವಚನ

New Project (9)
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಹಿಂದು ಸಮಾಜ ಎದುರಿಸುತ್ತಿರುವ ಸಮಸ್ಯೆಗಳ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯ ಎಂದು ಚಿನ್ಮಯ ಮಿಷನ್ ಕೇರಳ ಮುಖ್ಯಸ್ಥ ಸ್ವಾಮಿ ವಿವಿಕ್ತಾನಂದ ಸರಸ್ವತೀ ಹೇಳಿದರು.

ಕೇರಳ ಮಾರ್ಗದರ್ಶಕ ಮಂಡಳಿ ವತಿಯಿಂದ ಕೊಳತ್ತೂರು ಅದ್ವೈತಾಶ್ರಮದ ಮಠಾಧೀಶ ಶ್ರೀ ಚಿದಾನಂದ ಪುರಿ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿರುವ ಧರ್ಮಸಂದೇಶ ಯಾತ್ರೆ ಪೂರ್ವಭಾವಿಯಾಗಿ ವಿದ್ಯಾನಗರದ ಚಿನ್ಮಯ ಸಿ.ಬಿ.ಸಿ ಸಭಾಂಗಣದಲ್ಲಿ ನಡೆದ ಧರ್ಮರಕ್ಷಾ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು.

ಎಡನೀರು ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಧರ್ಮರಕ್ಷಾ ಸಂಗಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸ್ವಾಮಿ ಸತ್‌ಸ್ವರೂಪಾನಂದ ಸ್ವಾಮೀಜಿ, ಉಪ್ಪಳ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಸ್ವಾಮಿ ಅಯ್ಯಪ್ಪದಾಸ ಸ್ವಾಮೀಜಿ, ಸಾಧು ವಿನೋದ್, ಸ್ವಾಮಿ ತತ್ವಾನಂದ ಸರಸ್ವತಿ, ವೇದವೇದಾಮತಾನಂದ ಚೈತನ್ಯ, ಬ್ರಹ್ಮಕುಮಾರಿ ವಿಜಯಲಕ್ಷ್ಮೀ, ಮಧುಸೂಧನ್ ಅಯ್ಯರ್, ಸಬ್ರಹ್ಮಚಾರಿಣಿ ದಿಶಾ ಚೈತನ್ಯ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net