ಮೂರು ಹೋಳಾಗಿ ಬಿತ್ತು ದೇಗುಲದಲ್ಲಿದ್ದ ಅರಳಿ ಮರ; 80 ವರ್ಷಗಳಿಗೂ ಹಿಂದಿನ ವೃಕ್ಷ..

Untitled-2
Published on

ವಿಜಯನಗರ: ದೇವಸ್ಥಾನದ ಆವರಣದಲ್ಲಿದ್ದ ಹಳೆಯ ಅರಳಿ ಮರವೊಂದು ಮೂರು ಹೋಳಾಗಿ ಬಿದ್ದುಹೋಗಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಸಿನಿಮಾ ಮಂದಿರ ರಸ್ತೆಯ ಗೋಕರ್ಣೇಶ್ವರ ದೇಗುಲದ ಆವರಣದಲ್ಲಿ ಈ ಘಟನೆ ನಡೆದಿದೆ.

ಇದು ಸುಮಾರು 80 ವರ್ಷಗಳಿಗೂ ಹಿಂದಿನ ಮರ ಎನ್ನಲಾಗಿದ್ದು, ಮೂರು ಭಾಗವಾಗಿ ಬಿದ್ದಿರುವುದು ಸುತ್ತಮುತ್ತಲ ಜನರಿಗೆ ವಿಶೇಷ ಎನಿಸಿದೆ. ಆದ ಕಾರಣ ಹತ್ತಿರದ ಪ್ರದೇಶಗಳ ನೂರಾರು ಜನರು ದೇವಸ್ಥಾನದ ಸಮೀಪಕ್ಕೆ ಬಂದು ಬಿದ್ದ ಮರವನ್ನು ವೀಕ್ಷಿಸಲು ಜಮಾಯಿಸಿದ್ದಾರೆ. ಇಷ್ಟು ದೊಡ್ಡ ಮರ ಮೂರು ಹೋಳಾಗಿ ಬಿದ್ದರೂ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net