ಕಬ್ಬು ಕಟಾವು ಯಂತ್ರ- ಕಾರಿನ ನಡುವೆ ಭೀಕರ Accident; ಐವರ ದುರ್ಮರಣ

Road Accident
Published on

ವಿಜಯಪುರ: ಕಬ್ಬು ಕಟಾವು ಯಂತ್ರ-ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಐವರು ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲ್ಲೂಕಿನ ಬಿಳೇಬಾವಿ ಬಳಿ ನಡೆದಿದೆ.

ಮೃತರನ್ನು  ಭೀಮಶಿ ಸಂಕನಾಳ (65), ನಿಂಗಪ್ಪಾ ಪಾಟೀಲ್ (55), ಶಶಿಕಲಾ ಜೈನಾಪೂರ (50), ಶಾಂತವ್ವ ಶಂಕರ ಪಾಟೀಲ್ (45), ದಿಲೀಪ್ ಪಾಟೀಲ್ (45) ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ವಿಜಯಪುರ ತಾಲ್ಲೂಕಿನ ಅಲಿಯಾಬಾದ್​ ನಿವಾಸಿಗಳೆಂದು ವರದಿಯಾಗಿದೆ.

ಯಾದಗಿರಯ ಹುಣಸಗಿಯಿಂದ ವಾಪಸ್​ ಆಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ಕಾರು ಮತ್ತು ಕಬ್ಬು ಕಟಾವು ಮಷಿನ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ತಾಳಿಕೋಟೆ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net