ಗರ್ಭ ಧರಿಸಿಲ್ಲ, ಮರಿನೂ ಹಾಕಿಲ್ಲ.. ಆದ್ರೂ ಹಾಲು ಕೊಡುತ್ತೆ ಈ 45 ದಿನದ ಮೇಕೆ

Goat Milk
Published on

ಬೆಳಗಾವಿ: ಪ್ರತನಿತ್ಯ ನಾವು ಪ್ರಪಂಚದಲ್ಲಿ ವಿಸ್ಮಯಕಾರಿ ಘಟನೆಗಳು ನೋಡುತ್ತಿರುತ್ತೇವೆ ಹಾಗೂ ಕೇಳುತ್ತಿರುತ್ತೇವೆ. ಏಕಕಾಲದಲ್ಲಿ ಹಸು ನಾಲ್ಕು ಕರುಗಳಿಗೆ ಜನ್ಮ ನೀಡಿದ್ದು, ಮೂರು ಕಣ್ಣುಗಳನ್ನು ಮೇಕೆ ಹೊಂದಿರುವುದು ಸೇರಿದಂತೆ ಪ್ರತಿನಿತ್ಯ ನಾವು ಒಂದಿಲ್ಲೊಂದು ಸುದ್ದಿ ಕೇಳುತ್ತಿರುತ್ತೇವೆ. ಆದರೆ, 45 ದಿನಗಳ ಮೇಕೆ ಮರಿಯೊಂದು ಗರ್ಭ ಧರಿಸದೇ, ಮರಿಯನ್ನೂ ಹಾಕದೇ ಹಾಲು ಕೊಡುತ್ತಿರುವುದು ಆಶ್ಚರ್ಯ ಮೂಡಿಸಿದೆ.

ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಸಂಬರಗಿ ಸಮೀಪದ ಕಲ್ಲೊತ್ತಿ ಗ್ರಾಮದ ಅಣ್ಣಪ್ಪ ಬಾಬು ನಾಯಿಕವಾಡಿ ಎಂಬುವವರಿಗೆ ಸೇರಿದ 45 ದಿನದ ಮೇಕೆ ಮರಿಯೊಂದು ಗರ್ಭ ಧರಿಸದೇ, ಮರಿ ಹಾಕದೇ ಹಾಲು ಕೊಡುತ್ತಿರುವುದು ಎಲ್ಲರನ್ನೂ ಆಶ್ಚರ್ಯಚಕಿತಗೊಳಿಸಿದೆ.

ಸಾಮಾನ್ಯವಾಗಿ ಮೇಕೆಗಳು ಎರಡು ಮೊಲೆಗಳನ್ನು ಹೊಂದಿರುತ್ತವೆ. ಆದರೆ, ಈ ಮೇಕೆ 4 ಮೊಲೆಗಳನ್ನು ಹೊಂದಿರುವುದು ಮೊತ್ತೊಂದು ವಿಶೇಷವಾಗಿದೆ. ಮೇಕೆ ಮರಿಯು ಹಾಲು ಕೊಡುತ್ತಿರುವ ಸುದ್ದಿ ತಿಳಿದು ಸುತ್ತಮುತ್ತಲಿನ ಊರಿನವರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net