ಮುಂಬೈ: ಈ ತಿಂಗಳಾಂತ್ಯದಲ್ಲಿ ಶ್ರೀಲಂಕಾ ವಿರುದ್ಧ ನಡೆಯಲಿರುವ ಏಕದಿನ ಹಾಗೂ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಚುಟುಕು ಮಾದರಿಗೆ ಮಿ. 360 ಖ್ಯಾತಿಯ ಸ್ಪೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಇಷ್ಟು ದಿನ ಆಟಗಾರನಾಗಿ ಗುರುತಿಸಿಕೊಂಡಿದ್ದ ಸೂರ್ಯಕುಮಾರ್ ತಮ್ಮ ಹೊಸ ಜವಾಬ್ದಾರಿಯನ್ನು ಹೇಗೆ ನಿಭಾಯಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
ಟಿ20 ಮಾದರಿಗೆ ನಾಯಕನಾಗಿ ಆಯ್ಕೆಯಾದ ಕುರಿತು ಸೂರ್ಯಕುಮಾರ್ ಯಾದವ್ ಹರ್ಷ ವ್ಯಕ್ತಪಡಿಸಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅವರ ಪೋಸ್ಟ್ಗೆ ಬಹುತೇಕರು ಶುಭ ಹಾರೈಸಿದ್ದಾರೆ.
ಇದನ್ನೂ ಓದಿ: ಆಕೆ ಒಂಟಿ… ಈ ಕೆಲಸಕ್ಕಾಗಿ ಪ್ರತಿನಿತ್ಯ 320 ಕಿ.ಮೀ ಪ್ರಯಾಣಿಸುತ್ತಾನೆ!
ನನ್ನ ಮೇಲೆ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಿಮ್ಮ ಪ್ರೀತಿ, ಬೆಂಬಲ ಮತ್ತು ಶುಭ ಹಾರೈಕೆಗಳಿಗೆ ತುಂಬಾ ಧನ್ಯವಾದಗಳು. ಕಳೆದ ಕೆಲವು ವಾರಗಳು ಕನಸಿಗಿಂತ ಕಡಿಮೆಯಿಲ್ಲ. ಇದೆಲ್ಲದಕ್ಕಾಗಿ ನಾನು ನಿಜವಾಗಿಯೂ ಕೃತಜ್ಞನಾಗಿದ್ದೇನೆ. ದೇಶಕ್ಕಾಗಿ ಆಡುವುದು ಅತ್ಯಂತ ವಿಶೇಷವಾದ ಭಾವನೆಯಾಗಿದ್ದು ಅದನ್ನು ಪದಗಳಲ್ಲಿ ವ್ಯಕ್ತಪಡಿಸಲು ಕಷ್ಟ. ಈ ಹೊಸ ಪಾತ್ರವು ಬಹಳಷ್ಟು ಜವಾಬ್ದಾರಿ ಮತ್ತು ಉತ್ಸಾಹವನ್ನು ತರುತ್ತದೆ. ಮುಂದೆಯೂ ನಾನು ನಿಮ್ಮ ಬೆಂಬಲ ಮತ್ತು ಆಶೀರ್ವಾದವನ್ನು ಪಡೆಯುತ್ತೇನೆ ಎಂದು ಭಾವಿಸುತ್ತೇನೆ ಎಂದು ಸೂರ್ಯಕುಮಾರ್ ಯಾದವ್ ಬರೆದುಕೊಮಡಿದ್ದಾರೆ.
ಜೂನ್ 29ರಂದು ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ20 ವಿಶ್ವಕಪ್ ಪೈನಲ್ನಲ್ಲಿ ಸೂರ್ಯಕುಮಾರ್ ಯಾದವ್ ಬೌಂಡರಿ ಲೈನ್ ಬಳಿ ಹಿಡಿದ ಕ್ಯಾಚ್ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಇದಲ್ಲದೆ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.