

ಬೆಂಗಳೂರು: ಕರೊನಾ ಸೋಂಕು COVID19 ಹರಡುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಲಾಕ್ಡೌನ್ ಘೋಷಿಸಿರುವ ಸರ್ಕಾರ ಎಲ್ಲರಿಗೂ ಮನೆಯಲ್ಲೇ ಇರುವಂತೆ ನಿರ್ದೇಶಿಸಿದೆ. ಈ ನಡುವೆ, ಕರೊನಾಕ್ಕೆ ಸಂಬಂಧಿಸಿ ಏನೇ ಸಂದೇಹಗಳಿದ್ದರೂ ಸಹಾಯವಾಣಿ ಸಂಪರ್ಕಿಸುವಂತೆಯೂ ಕೋರಿದೆ.
ಸೋಷಿಯಲ್ ಡಿಸ್ಟೆನ್ಸಿಂಗ್ ಬಗ್ಗೆಯೂ ಜಾಗೃತಿ ಮೂಡಿಸಿರುವ ಸರ್ಕಾರ, ಈ ಬಗ್ಗೆ ಅಭಿಯಾನವನ್ನೂ ಆರಂಭಿಸಿದೆ. ಇವೆಲ್ಲದರ ನಡುವೆ, ಇದೀಗ #COVID19 ರೋಗ ಹರಡದಂತೆ ತಡೆಯಲು ಬೆಂಗಳೂರಿನಲ್ಲಿ #BBMP ವ್ಯಾಪ್ತಿಯಲ್ಲಿರುವ ಒಟ್ಟು 31 ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದೆ. ಈ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಜ್ವರ ಪ್ರಕರಣಗಳ ತಪಾಸಣೆ, ಶೀಘ್ರ ಪತ್ತೆ, ರೆಫರಲ್ ಸೇವೆ, ಚಿಕಿತ್ಸೆ ವ್ಯವಸ್ಥೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಜ್ವರ, ಉಸಿರಾಟದ ತೊಂದರೆ ಮುಂತಾದ ಲಕ್ಷಣ ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಈ ಜ್ವರ ಕೇಂದ್ರಗಳಿಗೆ ತೆರಳಿ ತಪಾಸಣೆಗೆ ಒಳಪಡಬೇಕು ಎಂದೂ ಸರ್ಕಾರ ಕೋರಿದೆ. ಆಸ್ಪತ್ರೆಗಳ ವಿವರ ಮತ್ತು ವೈದ್ಯಾಧಿಕಾರಿಗಳ ಸಂಪರ್ಕ ವಿವರ ಇಲ್ಲಿದೆ.