

ಪುದುಚೆರಿ: ಕರೊನಾ ವೈರಸ್ ಸೋಂಕು ಹೇಗೆ ವ್ಯಾಪಿಸುತ್ತದೆ ಎಂಬ ಅರಿವು ಸುಲಭವಾಗಿ ಆಗಬೇಕು ಎನ್ನುವುದಾದರೆ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರು ಟ್ವಿಟರ್ನಲ್ಲಿ ಶೇರ್ ಮಾಡಿದ ವಿಡಿಯೋವನ್ನು ಒಮ್ಮೆ ನೋಡಲೇಬೇಕು.
ಕೇವಲ ಒಂದು ನಿಮಿಷದ ವಿಡಿಯೋ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ವೈರಸ್ ಸೋಂಕು ಹರಡುವ ರೀತಿಯನ್ನು ಚೆನ್ನಾಗಿ ಬಿಂಬಿಸಲಾಗಿದೆ. ಒಂದು ಚಿಕ್ಕ ಮುಂಜಾಗ್ರತಾ ಕ್ರಮದ ಮೂಲಕ ಇಂತಹ ಹರಡುವಿಕೆಯನ್ನು ಹೇಗೆ ತಡೆಯಬಹುದು ಎಂಬುದನ್ನೂ ಮನೋಜ್ಞವಾಗಿ ಚಿತ್ರಿಸಲಾಗಿದೆ.
ಮುಂಜಾಗ್ರತೆ ವಹಿಸಿ ನೀವೂ ಸುರಕ್ಷಿತವಾಗಿರಿ, ನಿಮ್ಮವರನ್ನೂ ಸುರಕ್ಷಿತವಾಗಿರಿಸಿ ಎಂಬ ಸಂದೇಶ ಇದರಲ್ಲಿದ್ದು, ತಪ್ಪದೇ ವೀಕ್ಷಿಸಿ..