ದ್ವಿತೀಯ ಪಿಯು ವಿದ್ಯಾರ್ಥಿ ಕೊಲೆ! ಪಬ್ಲಿಕ್​ ಟಾಯ್ಲೆಟ್​ನಲ್ಲಿ ಆ ರಾತ್ರಿ ನಡೆದಿದ್ದಾದರೂ ಏನು?

murder
Published on

ಬೆಂಗಳೂರು: ನಗರದ ಪಬ್ಲಿಕ್​ ಟಾಯ್ಲೆಟ್​ನಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬನನ್ನು ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ.

18 ವರ್ಷದ ಆಕಾಶ್ ಕೊಲೆಯಾದವ. ಈತ ಎಸ್​ಎಸ್ಎಂಆರ್​ವಿ ಕಾಲೇಜಿನಲ್ಲಿ ದ್ವಿತೀಯ ಪಿಯು ಓದುತ್ತಿದ್ದ. ನಿನ್ನೆ ರಾತ್ರಿ ಸಿದ್ದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸುಲಭ್​ ಶೌಚಗೃಹಕ್ಕೆ ಮೂತ್ರ ವಿಸರ್ಜಿಸಲೆಂದು ಹೋಗಿದ್ದವ ಹೆಣವಾಗಿದ್ದಾನೆ. ಇದನ್ನೂ ಓದಿರಿ ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು

ನಿನ್ನೆ ರಾತ್ರಿ 9 ಗಂಟೆ ಸುಮಾರಿನಲ್ಲಿ ಆಕಾಶ್​ನನ್ನು ಟಾಯ್ಲೆಟ್​ನಲ್ಲೇ ಕೊಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಸಾರ್ವಜನಿಕರೊಬ್ಬರು ಶೌಚಗೃಹಕ್ಕೆ ಹೋದಾಗ ಯುವಕನ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಬಂದ ಸಿದ್ದಾಪುರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಕಾಶ್ ತಂದೆ ವೇಲು ಮತ್ತು ಕೊಲೆ ಮಾಡಿದ ಪುಂಡರ ನಡುವೆ ಗಲಾಟೆಯಾಗಿತ್ತು. ವೇಲು ಮೇಲಿನ ಕೋಪಕ್ಕೆ ಮಗ ಆಕಾಶ್​ನನ್ನು ಕೊಲೆ ಮಾಡಿದ್ದಾರೆ. ಆಕಾಶ್ ಮತ್ತು ಕೊಲೆ ಆರೋಪಿಗಳು ಹೊಂಬೇಗೌಡನಗರದ ಸ್ಲಂ ನಿವಾಸಿಗಳು ಎಂದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net