ವ್ಯಾಯಾಮಾಸಕ್ತರಿಗೆ ಇದು ಚುಚ್ಚೋ ಚುಚ್ಚೋ ವಿಷಯ.. ಆದರೆ ಎಲ್ಲರಿಗೂ ಅಲ್ಲ: ಇಲ್ಲಿದೆ ಬಿಬಿಎಂಪಿ ಹೊಸ ಮಾರ್ಗಸೂಚಿ..

VB
Published on

ಬೆಂಗಳೂರು: ನಗರದಲ್ಲಿನ ಅಪಾರ್ಟ್​ಮೆಂಟ್ ಮತ್ತು ಇತರೆಡೆ ಇರುವ ಜಿಮ್ ಮತ್ತು ಕ್ರೀಡಾ ಸೌಲಭ್ಯಗಳನ್ನು ಬಳಸಲು ಕೋವಿಡ್ ತಡೆ ಸಂಬಂಧಿತ ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಅನುಮತಿ ನೀಡಬೇಕು ಎಂದು ಬಿಬಿಎಂಪಿ ಮಾರ್ಗಸೂಚಿ ಹೊರಡಿಸಿದೆ.

ಪಾಲಿಕೆಯಿಂದ ಅ.11ರಂದು ಸ್ಥಳೀಯ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಿಗೆ ಹೊರಡಿಸಲಾದ ಕೋವಿಡ್ ಮಾರ್ಗಸೂಚಿಯಲ್ಲಿ ಜಿಮ್‌ಗಳನ್ನು ಶೇ.50 ಬಳಕೆಗೆ ಅವಕಾಶ ನೀಡಲಾಗಿತ್ತು. ಜತೆಗೆ, ಈಜುಕೊಳ ಬಳಸದಂತೆ ನಿರ್ಬಂಧ ಹೇರಲಾಗಿತ್ತು. ಮಂಗಳವಾರ ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಅದರಲ್ಲಿ ಕೋವಿಡ್ ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

ಒಮ್ಮೆಗೆ ಶೇ.50 ಜನರು ಜಿಮ್ ಉಪಯೋಗಿಸಬೇಕು. ಈಜುಕೊಳಗಳನ್ನು ಉಪಯೋಗಿಸಲು ಅನುಮತಿ ನೀಡಿದ್ದು, ಪ್ರತಿ ಬ್ಯಾಚ್‌ನಲ್ಲಿ ಈಜುಗಾರರು ಬಳಸುವ ವಿಶ್ರಾಂತಿ ಕೊಠಡಿಗಳು, ದಾರಿಗಳು ಹಾಗೂ ಸಾಮಾನ್ಯ ಪ್ರದೇಶವನ್ನು ಶೇ.1 ಪ್ರಮಾಣದ ಸೋಡಿಯಂ ಹೈಪೋಕ್ಲೋರೈಟ್ ದ್ರಾವಣದಿಂದ ಸ್ವಚ್ಛಗೊಳಿಸಬೇಕು ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net