

ಪುತ್ತೂರು ಗ್ರಾಮಾಂತರ: ಕುಂಬ್ರ ಮೂರ್ತೆದಾರರ ಸೇವಾ ಸಹಕಾರಿ ಸಂಘ 2,49,409 ರೂ. ಲಾಭ ಗಳಿಸಿದ್ದು ಸದಸ್ಯರಿಗೆ ಶೇ.8 ಡಿವಿಡೆಂಡ್ ನೀಡಲಾಗುವುದು. ಸ್ವಂತ ಜಾಗದಲ್ಲಿ ಕಟ್ಟಡ ನಿರ್ಮಿಸಿ ಪ್ರಧಾನ ಕಚೇರಿ ಮತ್ತು ಮುಂದೆ 2 ಶಾಖೆ ತೆರೆಯುವ ಯೋಜನೆ ಇದೆ ಎಂದು ಸಂಘದ ಅಧ್ಯಕ್ಷ ಆರ್.ಸಿ ನಾರಾಯಣ್ ಹೇಳಿದರು.
ಒಳಮೊಗ್ರು ಗ್ರಾಮದ ಕುಂಬ್ರದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿದರು. ದಿನೇಶ್ ಕೆ. ವರದಿ ವಾಚಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ಶಾಂತಿವನ ಲೆಕ್ಕಪತ್ರ ಮಂಡಿಸಿದರು. ನಿರ್ದೇಶಕ ನಾರಾಯಣ ಪೂಜಾರಿ ಕುರಿಕ್ಕಾರ ಬಜೆಟ್ ಮಂಡಿಸಿದರು. ದ.ಕ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ನಿರ್ದೇಶಕ ವಿಶ್ವನಾಥ ಬಿ. ಮಾತನಾಡಿದರು.
ಹಿರಿಯ ಮೂರ್ತೆದಾರ ಚೆನ್ನಪ್ಪ ಪೂಜಾರಿ ಬಾಕ್ತಿಮಾರ್ ಅವರನ್ನು ಗೌರವಿಸಲಾಯಿತು. ನಿರ್ದೇಶಕ ವಸಂತ ಪೂಜಾರಿ ಬಂಬಿಲ ಸನ್ಮಾನಪತ್ರ ವಾಚಿಸಿದರು. ವಿದ್ಯಾರ್ಥಿ ಪ್ರೋತ್ಸಾಹಧನ ನೀಡಲಾಯಿತು. ಸಂಘದ ಉಪಾಧ್ಯಕ್ಷ ಧನಂಜಯ ಪೂಜಾರಿ, ತ್ರಿವೇಣಿ ಪಲ್ಲತ್ತಾರು, ನಿರ್ದೇಶಕರಾದ ವಿಜಯ ಪೂಜಾರಿ ಆನಡ್ಕ, ರಾಮಣ್ಣ ಪೂಜಾರಿ ಕರ್ನೂರು, ಚೆನ್ನಪ್ಪ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ ಸ್ವಾಗತಿಸಿದರು. ಸುಷ್ಮಾ ಕುಮಾರಿ ಕೋಡಿಬೈಲು ವಂದಿಸಿದರು.