

ತುಮಕೂರು: ಸಮುದ್ರಹಳ್ಳಿಯ ಮನೆಯೊಂದರಲ್ಲಿ 15 ವರ್ಷದ ಬಾಲಕಿ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೃತಳ ತಂದೆ ವಿರುದ್ಧವೇ ಆಕಯ ಅಜ್ಜ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ರಾಜಣ್ಣ ಎಂಬುವರ ಪುತ್ರಿ ಚಂದ್ರಿಕಾ ಮೃತ ದುರ್ದೈವಿ. ಈಕೆ ತಾಯಿ ಕೆಲ ದಿನಗಳ ಹಿಂದೆ ಮೃತಪಟ್ಟಿದ್ದರು. ತಂದೆ ಜತೆಯಲ್ಲಿ ಚಂದ್ರಿಕಾ ವಾಸಿಸುತ್ತಿದ್ದಳು. 9ನೇ ತರಗತಿ ಓದುತ್ತಿದ್ದ ಆಕೆ, ಶಾಲೆಗೆ ರಜೆ ಇದ್ದ ಕಾರಣ ರಾಮನಗರ ಜಿಲ್ಲೆಯ ಅಜ್ಜನ ಮನೆಯಲ್ಲಿದ್ದಳು. ಇತ್ತೀಚೆಗೆ ಶಾಲೆ ಆರಂಭವಾದ ಹಿನ್ನೆಲೆಯಲ್ಲಿ ತಂದೆ ಊರು ಸಮುದ್ರಹಳ್ಳಿಗೆ ಮರಳಿದ್ದಳು. ಮಂಗಳವಾರ ನೇಣುಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾಳೆ. ಇದನ್ನೂ ಓದಿರಿ ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?
ಮೊಮ್ಮಗಳ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಾಲಕಿಯ ಅಜ್ಜ ಕೆ.ಸಿ.ಶಿವಣ್ಣ, ತಂದೆ ರಾಜಣ್ಣನೇ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಮರಣೋತ್ತರ ವರದಿ ಬಂದ ಬಳಿಕ ಬಾಲಕಿ ಸಾವು ಆತ್ಮಹತ್ಯೆಯೋ, ಕೊಲೆಯೋ ಎಂದು ಗೊತ್ತಾಗಲಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.