ಕುರಿಮಂದೆಗೆ ಡಿಕ್ಕಿ ಹೊಡೆದ ಟಿಪ್ಪರ್, 12 ಕುರಿಗಳ ದಾರುಣ ಸಾವು..

Accident Bike
Published on

ಬೆಳಗಾವಿ: ಕುರಿಗಾಹಿಯೊಬ್ಬರ ದೀಪಾವಳಿಯ ಖುಷಿಯನ್ನು ಟಿಪ್ಪರ್ ಚಾಲಕನೊಬ್ಬ ಹಾಳುಗೆಡವಿದ್ದಾನೆ. ಮಾತ್ರವಲ್ಲ, ಆತನಿಗೆ ಭಾರಿ ನಷ್ಟ ಉಂಟು ಮಾಡುವ ಮೂಲಕ ಕಂಗಾಲಾಗಿಸಿದ್ದಾನೆ. ಬೆಳಗಾವಿಯ ಅಗಸಗಿ ಎಂಬಲ್ಲಿ ಇಂಥದ್ದೊಂದು ಘಟನೆ ನಡೆದಿದೆ.

ಹೀಗೆ ಹಬ್ಬದ ಖುಷಿಯನ್ನು ಕಳೆದುಕೊಂಡ ಕುರಿಗಾಹಿಯ ಹೆಸರು ಬೀರಪ್ಪ ಶಾಪೂರ್​ಕರ್. ಅಷ್ಟಕ್ಕೂ ಈ ಕುರಿಗಾಹಿಯ ಹಬ್ಬದ ಖುಷಿ ಹಾಳಾಗಲು ಕಾರಣ ಅಪಘಾತ. ಕಡೋಲಿ ಗ್ರಾಮದ ಬೀರಪ್ಪ ಕುರಿ ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಅಜಾಗರೂಕತೆಯಿಂದ ಟಿಪ್ಪರ್ ಚಲಾಯಿಸಿದ ವ್ಯಕ್ತಿ ಏಕಾಏಕಿ ಕುರಿಮಂದೆ ಮೇಲೆಯೇ ನುಗ್ಗಿಸಿದ್ದು, 12 ಕುರಿಗಳು ದಾರುಣ ಸಾವು ಕಂಡಿವೆ. ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಟಿಪ್ಪರ್​ ಸಹಿತ ಪರಾರಿಯಾಗಿ ತಲೆ ಮರೆಸಿಕೊಂಡಿದ್ದಾನೆ. ಒಂದು ಡಜನ್ ಕುರಿಗಳನ್ನು ಕಳೆದುಕೊಂಡಿರುವ ಬೀರಪ್ಪ ಕಂಗಾಲಾಗಿದ್ದಾನೆ. ಕಾಕತಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ಟಿಪ್ಪರ್ ಚಾಲಕನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net