ಕರ್ನಾಟಕಕ್ಕೆ 11.48 ಕೋಟಿ ರೂ. ನೆರವು

Money vvani
Published on

ನವದೆಹಲಿ: ನೆರೆ, ಭೂಕುಸಿತ, ಚಂಡಮಾರುತ, ಅನಾವೃಷ್ಟಿಯಿಂದ ಉಂಟಾದ ಹಾನಿಗೆ ಕೇಂದ್ರ ಸರ್ಕಾರ -ಠಿ;5,751.27 ಕೋಟಿ ಹೆಚ್ಚುವರಿ ಪರಿಹಾರ ನೀಡಿದ್ದು, ಕರ್ನಾಟಕ ಸೇರಿ ಎಂಟು ರಾಜ್ಯಗಳಿಗೆ ಹಂಚಿದೆ.

2018-19ರಲ್ಲಿ ಕರ್ನಾಟಕದಲ್ಲಿ ಹಿಂಗಾರು ಹಂಗಾಮಿನ ಅವಧಿಯಲ್ಲಿ ಅನಾವೃಷ್ಟಿಯಿಂದ ಉಂಟಾದ ಅನಾಹುತಕ್ಕೆ ಪಂಶುಸಂಗೋಪನಾ ವಲಯದಲ್ಲಿ ಪರಿಹಾರ ಕಲ್ಪಿಸಲು -ಠಿ;11.48 ಕೋಟಿ ನೆರವು ಒದಗಿಸಲಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕರೊನಾ ತಡೆಯಲು ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರ ರಾಜ್ಯಕ್ಕೆ 83 ಕೋಟಿ ರೂ. ತುರ್ತು ಅನುದಾನ ನೀಡಿದೆ. ಈ ಹಣದಲ್ಲಿ 66 ಕೋಟಿ ರೂ. ಎಲ್ಲ ಜಿಲ್ಲೆಗಳಿಗೆ ಬಿಡುಗಡೆ ಆಗಿದೆ. ಆರೋಗ್ಯ ಇಲಾಖೆಗೂ 20 ಕೋಟಿ ರೂ. ಅನುದಾನ ದೊರೆತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net