More

    ಭಾರತದ ಜಿಡಿಪಿ ಬೆಳವಣಿಗೆ ಮುನ್ನೋಟ ಶೇಕಡ 2.5ಕ್ಕೆ ಇಳಿಕೆ: ಡೇಟಾ ಪರಿಷ್ಕರಿಸಿದ ಮೂಡಿ’ಸ್

    ನವದೆಹಲಿ: ಕರೊನಾ ಸೋಂಕು ಜಾಗತಿಕ ಅರ್ಥವ್ಯವಸ್ಥೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಭಾರತವೂ ಇದರಿಂದ ಹೊರತಾಗಿಲ್ಲ. ಅನಿರೀಕ್ಷಿತ ಬೆಳವಣಿಗೆ ಕಾರಣ ಎಲ್ಲ ದೇಶಗಳ ಜಿಡಿಪಿ ಬೆಳವಣಿಗೆ ಕೂಡ ಕುಂಟಿತವಾಗಿದೆ. ಭಾರತದ ಜಿಡಿಪಿ ಬೆಳವಣಿಗೆಯ ಮುನ್ನೋಟವನ್ನು ಮೂಡಿ’ಸ್​ ಇನ್​ವೆಸ್ಟರ್ಸ್​ ಸರ್ವೀಸ್ ಶುಕ್ರವಾರ ಶೇಕಡ 2.5ಕ್ಕೆ ಇಳಿಕೆ ಮಾಡಿದೆ. ಈ ಹಿಂದೆ ಜಿಡಿಪಿ ಬೆಳವಣಿಗೆ ಮುನ್ನೋಟವನ್ನು ಶೇಕಡ 5.3 ಎಂದು ಅಂದಾಜಿಸಲಾಗಿತ್ತು.

    ಗ್ಲೋಬಲ್ ಮ್ಯಾಕ್ರೋ ಔಟ್​ಲುಕ್​ 2020-21 ಎಂಬ ವರದಿಯಲ್ಲಿ ಮೂಡಿ’ಸ್ ಇದನ್ನು ಉಲ್ಲೇಖಿಸಿದ್ದು, ಭಾರತದಲ್ಲಿ ಆದಾಯದಲ್ಲಿ ಭಾರಿ ಇಳಿಕೆ ಆಗಲಿದ್ದು, ಬೆಳವಣಿಗೆ ದರ ಶೇಕಡ 2.5ಕ್ಕೆ ಇಳಿಕೆಯಾಗಲಿದೆ. 2021ರಲ್ಲಿ ಮತ್ತೆ ಚೇತರಿಸಿಕೊಂಡು ಮುನ್ನಡೆಯಲಿದಎ ಎಂಬ ಅಂಶವಿದೆ. ​

    ಕರೊನಾ ಸೋಂಕಿನ ಪರಿಣಾಮ ಜಾಗತಿಕ ಆರ್ಥಿಕತೆ ಕೂಡ ನಿಧಾನಗತಿಗೆ ಇಳಿದಿದೆ. ಇಲ್ಲೂ ಈ ವರ್ಷದ ಬೆಳವಣಿಗೆಯ ಮುನ್ನೋಟ ಶೇಕಡ 2.6 ಆಗಿರಲಿದೆ. 2021ರಲ್ಲಿ ಇದು ಮತ್ತೆ ಚೇತರಿಸಿಕೊಂಡು ಶೇಕಡ 3.2 ಕ್ಕೆ ಏರಿಕೆಯಾಗಲಿದೆ. (ಏಜೆನ್ಸೀಸ್)

    ಬಿಗ್​ ರಿಲೀಫ್​ ಸಿಕ್ಕಿದೆ ಎಸ್​ಬಿಐ ಗ್ರಾಹಕರಿಗೆ- ಅವಧಿ ಸಾಲಗಳ ಇಎಂಐ ಆಟೋಮ್ಯಾಟಿಕ್ ಆಗಿ ಮೂರು ತಿಂಗಳು ಮುಂದಕ್ಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts