More

    ಬಿಗ್​ ರಿಲೀಫ್​ ಸಿಕ್ಕಿದೆ ಎಸ್​ಬಿಐ ಗ್ರಾಹಕರಿಗೆ- ಅವಧಿ ಸಾಲಗಳ ಇಎಂಐ ಆಟೋಮ್ಯಾಟಿಕ್ ಆಗಿ ಮೂರು ತಿಂಗಳು ಮುಂದಕ್ಕೆ!

    ಮುಂಬೈ: ನಮ್ಮ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ) ಗ್ರಾಹಕರಿಗೆ ಶುಕ್ರವಾರ ಬಿಗ್​ ರಿಲೀಫ್ ಸಿಕ್ಕಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಬೆಳಗ್ಗೆ ರೆಪೋದರ ಕಡಿತವೂ ಸೇರಿ ಅನೇಕ ಕ್ರಮಗಳನ್ನು ಘೋಷಿಸಿದ ಬೆನ್ನಿಗೇ ಎಸ್​ಬಿಐ ಕೂಡ ಅದನ್ನು ಪಾಲಿಸಿ ಗ್ರಾಹಕರನ್ನು ನಿರಾಳರನ್ನಾಗಿಸಿದೆ.

    ಎಸ್​ಬಿಐ ಚೇರ್​ಮನ್​ ರಜನೀಶ್ ಕುಮಾರ್​ ಅವರು ಸಿಎನ್​ಬಿಸಿ ಟಿವಿ ಜತೆಗೆ ಮಾತನಾಡಿ, ಎಲ್ಲ ರೀತಿಯ ಅವಧಿ ಸಾಲಗಳ ಇಎಂಐ ತನ್ನಿಂತಾನೇ ಮೂರು ತಿಂಗಳು ಮುಂದಕ್ಕೆ ಹೋಗುತ್ತದೆ. ಅದು ಕಾರು ಸಾಲ, ಗೃಹ ಸಾಲ, ವೈಯಕ್ತಿ ಸಾಲ ಅಥವಾ ಇನ್ಯಾವುದೇ ಅವಧಿ ಸಾಲವೇ ಇರಬಹುದು ಎಲ್ಲದಕ್ಕೂ ಇದು ಅನ್ವಯವಾಗುತ್ತದೆ. ಇದಕ್ಕಾಗಿ ಗ್ರಾಹಕರು ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಕರೊನಾ ಸೋಂಕಿನ ವ್ಯತಿರಿಕ್ತ ಪರಿಣಾಮ ಆರ್ಥಿಕತೆ ಮೇಲೆ ಆಗುವುದನ್ನು ತಡೆಯಲು ಆರ್​ಬಿಐ ಶುಕ್ರವಾರ ಕೆಲವು ಕ್ರಮಗಳನ್ನು ತೆಗೆದುಕೊಂಡಿದ್ದು, ತತ್​ಕ್ಷಣವೇ ಜಾರಿಗೆ ಬರುವಂತೆ ಆದೇಶವನ್ನೂ ನೀಡಿದೆ. (ಏಜೆನ್ಸೀಸ್) 

    ಲಕ್ಷ್ಮಣ ರೇಖೆ ದಾಟದೇ ಇದ್ದವರಿಗೆ ದೂರದರ್ಶನದಿಂದ ಒಂದು ಗಿಫ್ಟ್ – ನಾಳೆ ಬೆಳಗ್ಗೆಯೇ ನಿಮ್ಮ ಮನೆಯೊಳಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts