More

    ಲಕ್ಷ್ಮಣ ರೇಖೆ ದಾಟದೇ ಇದ್ದವರಿಗೆ ದೂರದರ್ಶನದಿಂದ ಒಂದು ಗಿಫ್ಟ್ – ನಾಳೆ ಬೆಳಗ್ಗೆಯೇ ನಿಮ್ಮ ಮನೆಯೊಳಗೆ!

    ನವದೆಹಲಿ: ಲಾಕ್​ ಡೌನ್ ಆಗಿ ಮನೆಯಲ್ಲಿ ಕುಳಿತಿರುವವರಿಗೆ ಒಂದು ಸಿಹಿ ಸುದ್ದಿ. ಮನೆಯಲ್ಲಿ ಕುಳಿತು ಏನು ಮಾಡುವುದೆಂಬ ಚಿಂತೆಯೇ? 80ರ ದಶಕದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯನ್ನೊಮ್ಮೆ ನೋಡಿ ಬಿಡೋಣ ಎಂಬ ಆಸೆ ಏನಾದರೂ ಮನದಲ್ಲಿದೆಯೇ? ಹಾಗಂತ ಬಹಳ ಜನ ಟ್ವಟರ್​ನಲ್ಲಿ ದೂರದರ್ಶನಕ್ಕೆ ಕೋರಿಕೆ ಸಲ್ಲಿಸಿದ್ದರು. ಎಲ್ಲರ ಅಪೇಕ್ಷೆ ಮೇರೆಗೆ ನಾಳೆಯಿಂದಲೇ ರಾಮಾಯಣ ಧಾರಾವಾಹಿ ದಿನಕ್ಕೆ ಎರಡು ಹೊತ್ತು ಪ್ರಸಾರವಾಗಲಿದೆ.

    ಹೌದು, ಪ್ರಸಾರ ಭಾರತಿ ಈ ಬಗ್ಗೆ ನಿರ್ಧಾರ ತೆಗೆದುಕೊಂಡಿದೆ, ಕೇಂದ್ರ ಮಾಹಿತಿ ಮತ್ತು ವಾರ್ತಾ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್​ ಶುಕ್ರವಾರ ರಾಮಾಯಣ ಧಾರಾವಾಹಿ ಮರುಪ್ರಸಾರದ ವಿಚಾರವನ್ನು ಪ್ರಕಟಿಸಿದರು. ಇದರ ಬೆನ್ನಲ್ಲೇ, ಡಿಡಿ ನ್ಯೂಸ್ ಇದನ್ನು ಟ್ವೀಟ್ ಮಾಡಿದ್ದು, ಡಿಡಿ ನ್ಯಾಷನಲ್ ಚಾನೆಲ್​ನಲ್ಲಿ ಮಾರ್ಚ್ 28ರಿಂದ ಪ್ರತಿನಿತ್ಯ ಬೆಳಗ್ಗೆ 9ರಿಂದ 10 ಮತ್ತು ರಾತ್ರಿ 9 ರಿಂದ 10 ರ ಅವಧಿಯಲ್ಲಿ ತಲಾ ಒಂದೊಂದು ಎಪಿಸೋಡನ್ನು ಪ್ರಸಾರವಾಗಲಿದೆ ಎಂದು ಪ್ರಕಟಿಸಿದೆ.

    ರಮಾನಂದ ಸಾಗರ್​ ಅವರ ರಾಮಾಯಣ ಧಾರಾವಾಹಿ ಈಗ ಮಧ್ಯವಯಸ್ಸಿನಲ್ಲಿ ಇರುವವರಿಗೆ ಮತ್ತು ಹಿರಿಯರಿಗೆ ಸರೀ ನೆನಪಿನಲ್ಲಿ ಇರಬಹುದು. ಅರುಣ್ ಗೋವಿಲ್ ರಾಮನ ಪಾತ್ರದಲ್ಲಿ, ದೀಪಿಕಾ ಚಿಖಾಲಿಯಾ ಸೀತಾ ಆಗಿ, ಅರವಿಂದ ತ್ರಿವೇದಿ ಅವರು ರಾವಣನಾಗಿ ಧಾರಾ ಸಿಂಗ್ ಹನುಮಂತನ ಪಾತ್ರದಲ್ಲಿ ಗಮನಸೆಳೆದ್ದಿದ್ದರು. ಈ ಸರಣಿ ಅಂದು 1987ರ ಜನವರಿ 25ರಿಂಧ 1988ರ ಜುಲೈ 31ರ ತನಕ ಪ್ರಸಾರವಾಗಿತ್ತು. ಇದೇ ಅವಧಿಯಲ್ಲಿ ಪ್ರಸಾರವಾಗಿದ್ದ ಇನ್ನೊಂದು ಪೌರಾಣಿಕ ಧಾರಾವಾಹಿ ಬಿ.ಆರ್. ಛೋಪ್ರಾ ಅವರ ಮಹಾಭಾರತ.

    ಈ ಎರಡು ಧಾರಾವಾಹಿಗಳು ಪ್ರಸಾರವಾಗುತ್ತಿದ್ದ ಸಮಯದಲ್ಲಿ ಒಬ್ಬನೂ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಎಲ್ಲರೂ ಟಿವಿ ಎದುರೇ ಕುಳಿತಿರುತ್ತಿದ್ದರು. ಹೊರಗೆ ರಸ್ತೆ ನಿರ್ಜನವಾಗಿರುತ್ತಿತ್ತು. ಒಂದು ರೀತಿಯ ಕರ್ಫ್ಯೂ ಚಾಲ್ತಿಯಲ್ಲಿದ್ದಂತೆ ಇರುತ್ತಿತ್ತು ಆ ದಿನಗಳ ಆ ಹೊತ್ತು! ಇಂದು ಧಾರಾವಾಹಿ ನೋಡುವುದಕ್ಕಾಗಿ ರಸ್ತೆ ನಿರ್ಜನವಾಗಿಲ್ಲ. ಲಾಕ್ ಡೌನ್ ಘೋಷಣೆ ಹಿನ್ನೆಲೆಯಲ್ಲಿ ಮತ್ತೆ ಈ ಧಾರಾವಾಹಿಯ ಮರುಪ್ರಸಾರಕ್ಕೆ ವೇದಿಕೆ ಸಿದ್ಧವಾಗಿದೆ!

    ನನ್ನ ಮನೆಯನ್ನೇ ಕರೊನಾ ಚಿಕಿತ್ಸೆಗೆ ಬಳಸಿಕೊಳ್ಳಿ ಎಂದ ಕಮಲ್ ಹಾಸನ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts